Asianet Suvarna News Asianet Suvarna News

PM Modi UAE Visit : ಒಮಿಕ್ರಾನ್ ಆತಂಕದ ಕಾರಣ ಮುಂದೂಡಿಕೆ?

ಜನವರಿ ಮೊದಲ ವಾರ ಯುಎಇ ಪ್ರವಾಸ ನಿಗದಿಯಾಗಿತ್ತು
ಸಮಗ್ರ ಆರ್ಥಿಕ ಪಾಲಿದಾರಿಕೆ ಒಪ್ಪಂದಕ್ಕೆ ಸಹಿ
ಯುಎಇ ದೇಶಕ್ಕೆ ಪ್ರಧಾನಿ ಮೋದಿಯ ಮೂರನೇ ಭೇಟಿ
 

The visit of Prime Minister Narendra Modi to UAE has been postponed amid a spike in Omicron cases san
Author
Bengaluru, First Published Dec 29, 2021, 8:34 PM IST

ನವದೆಹಲಿ (ಡಿ. 29): 2022ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi ) ಅವರು ಅರಬ್‌ ಸಂಯುಕ್ತ ಸಂಸ್ಥಾನ ದೇಶಕ್ಕೆ (UAE) ಕೈಗೊಳ್ಳಬೇಕಿದ್ದ ವರ್ಷದ ಮೊದಲ ಪ್ರವಾಸ ಒಮಿಕ್ರಾನ್  (Omicron) ಭೀತಿಯಿಂದಾಗಿ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಭಾರತ (India) ಮತ್ತು ಯುಎಇ ದೇಶಗಳ ನಡುವಿನ ರಾಜತಾಂತ್ರಿಕ ಬಾಂಧವ್ಯವು 50ನೇ ವರ್ಷದ ಸಂಭ್ರಮಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಮೋದಿ ಅವರ ಈ ಪ್ರವಾಸವು ಬಹುಮುಖ್ಯವಾಗಿತ್ತು. ಯುಎಇ  ಭೇಟಿ ವೇಳೆ ಅವರು ದುಬೈ ಎಕ್ಸ್‌ಪೋಗೂ (Dubai Expo) ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿತ್ತು.

ಯುಎಇಯಲ್ಲಿ ದಿನನಿತ್ಯದ ಪ್ರಕರಣಗಳಲ್ಲಿ ಸಾಕಷ್ಟು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನವರಿ 6 ರಿಂದ ನಡೆಯಬೇಕಿದ್ದ ಮೋದಿ ಪ್ರವಾಸವನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಎಎನ್ಐ ಸುದ್ದಿ ಸಂಸ್ತೆ ವರದಿ ಮಾಡಿದೆ. ಭಾರತ ಹಾಗೂ ಯುಎಇ ನಡುವೆ ಆರ್ಥಿಕ ಬಾಂಧವ್ಯ ಉತ್ತೇಜನಕ್ಕಾಗಿ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) (CEPA) ಕುರಿತಾಗಿ ಸಾಕಷ್ಟು ಮಾತುಕತೆಗಳು ನಡೆಯುತ್ತಿದ್ದು ಪ್ರಧಾನಿ ಭೇಟಿಯ ವೇಳೆ ಈ ಒಪ್ಪಂದವನ್ನು ಪ್ರಕಟಿಸಬಹುದು ಎಂದು ಸುದ್ದಿಯಾಗಿತ್ತು. ಗಲ್ಫ್ ರಾಷ್ಟ್ರಗಳ ಪೈಕಿ ಭಾರತದ ಮೊದಲ ಸಿಇಪಿಎ ( Comprehensive Economic Partnership Agreement) ಇದಾಗಿರಲಿದೆ.

ಭಾರತ, ಇಸ್ರೇಲ್, ಅಮೆರಿಕ ಮತ್ತು ಯುಎಇ ದೇಶಗಳನ್ನು ಒಳಗೊಂಡ ವಿದೇಶಾಂಗ ಮಂತ್ರಿಗಳು, ಆರ್ಥಿಕ ಹಾಗೂ ಮೂಲಸೌಕರ್ಯ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದ ಹೊಸ ಕ್ವಾಡ್ ದುಬೈ ಎಕ್ಸ್ ಪೋ 2020 ನಡುವೆ ಮಾತುಕತೆ ನಡೆಸುವುದು ನಿಗದಿಯಾಗಿತ್ತು. ದುಬೈ ಎಕ್ಸ್ ಪೋದಲ್ಲಿ ಇಂಡಿಯನ್ ಪೆವಿಲಿಯನ್ ಸಾಕಷ್ಟು ಸದ್ದು ಮಾಡುತ್ತಿದ್ದು, ಮುಂದಿನ ವರ್ಷದ ಮಾರ್ಚ್ ವರೆಗೆ ಇದು ಮುಂದುವರಿಯಲಿದೆ. ಇನ್ನೊಂದೆಡೆ ಯುರೋಪ್ (Europe )ಹಾಗೂ ಅಮೆರಿಕದಲ್ಲಿ(United States) ಕೋವಿಡ್-19 ರೂಪಾಂತರ ತ್ವರಿತವಾಗಿ ಹರಡುತ್ತಿದ್ದು ಇಡೀ ಜಗತ್ತಿಗೆ ಈ ಆತಂಕ ಸೃಷ್ಟಿಯಾಗಿದೆ. ಇನ್ನೊಂದೆಡೆ ಯುಎಇಯಲ್ಲಿ ಆರೋಗ್ಯ ಮತ್ತು ಸಾಂಕ್ರಾಮಿಕ ರೋಗ ನಿಯಂತ್ರಣ ಸಚಿವಾಲಯ ಬುಧವಾರ ನೀಡಿದ ಪ್ರಕಟಣೆಯಲ್ಲಿ ದೇಶದಲ್ಲಿ 2234 ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿದೆ. 775 ಪ್ರಕರಣಗಳು ಚೇತರಿಕೆ ಕಂಡಿದೆ.  ಇನ್ನು ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 9195 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ 781 ಒಮಿಕ್ರಾನ್ ರೂಪಾಂತರದ ಪ್ರಕರಣಗಳಾಗಿವೆ.

ರಾಹುಲ್ ಗಾಂಧಿಯೇ ಪಕ್ಷದ ಅಧ್ಯಕ್ಷ, 2022ರಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣ!
2015 ರ ಆಗಸ್ಟ್‌ನಲ್ಲಿ ಪ್ರಧಾನಿ ಮೋದಿಯವರ ಯುಎಇ ಭೇಟಿಯು ಉಭಯ ದೇಶಗಳ ನಡುವಿನ ಹೊಸ ಸಮಗ್ರ ಮತ್ತು ಕಾರ್ಯತಂತ್ರದ ಸಹಭಾಗಿತ್ವದ ಆರಂಭವನ್ನು ಗುರುತಿಸಿತು. ಅಬುಧಾಬಿಯ ಕ್ರೌನ್ ಪ್ರಿನ್ಸ್ ಮತ್ತು ಯುಎಇ ಸಶಸ್ತ್ರ ಪಡೆಗಳ ಉಪ ಸುಪ್ರೀಂ ಕಮಾಂಡರ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಫೆಬ್ರವರಿ 2016 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ 2017 ರ ಜನವರಿಯಲ್ಲಿ ಎರಡನೇ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದರು. ಈ ಭೇಟಿಯ ಸಮಯದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು 'ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ'ಗೆ ಮೇಲ್ದರ್ಜೆಗೇರಿಸಲಾಯಿತು. 2018ರಲ್ಲಿ ಪ್ರಧಾನಿ ಮೋದಿ 2ನೇಬಾರಿಗೆ ಯುಎಇಗೆ ಭೇಟಿ ನೀಡಿದ್ದರು ಈ ವೇಳೆ ದುಬೈನಲ್ಲಿ ನಡೆದ 6ನೇ ವರ್ಲ್ಡ್ ಗೌರ್ನಮೆಂಟ್ ಸಮಿಟ್‌ ನಲ್ಲಿ ಮಾತನಾಡಿದ್ದರು. ಈ ಕಾರ್ಯಕ್ರಮಕ್ಕೆ ಭಾರತ ಮುಖ್ಯ ಅತಿಥಿಯಾಗಿ ಭಾಗವಹಿಸಿತ್ತು. ಆಗಸ್ಟ್ 2019 ರಲ್ಲಿ ಯುಎಇಗೆ ತಮ್ಮ ಮೂರನೇ ಮತ್ತು ಕೊನೆಯ ಭೇಟಿಯನ್ನು ನೀಡಿದ್ದರು ಮತ್ತು ಭೇಟಿಯ ಸಮಯದಲ್ಲಿ ಯುಎಇಯ ಅತ್ಯುನ್ನತ ಪ್ರಶಸ್ತಿಯಾದ 'ಆರ್ಡರ್ ಆಫ್ ಜಾಯೆದ್' ಅನ್ನು ಸ್ವೀಕರಿಸಿದ್ದರು.

Follow Us:
Download App:
  • android
  • ios