ಟ್ರಂಪ್ ಸರ್ಕಾರದ ಮತ್ತೊಂದು ವಿಕೆಟ್ ಪತನ! ವಿಶ್ವಸಂಸ್ಥೆಯಲ್ಲಿನ ಅಮೆರಿಕ ರಾಯಭಾರಿ ನಿಕ್ಕಿ ಹ್ಯಾಲೆ ರಾಜೀನಾಮೆ! ರಾಜೀನಾಮೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ! ಹ್ಯಾಲೆ ರಾಜೀನಾಮೆ ಪತ್ರ ಅಂಗೀಕರಿಸಿದ ಡೋನಾಲ್ಡ್ ಟ್ರಂಪ್!2020ರಲ್ಲಿ ಟ್ರಂಪ್ ವಿರುದ್ಧ ಸ್ಪರ್ಧೆ ಮಾಡ್ತಾರಾ ಹ್ಯಾಲೆ?! ಟ್ರಂಪ್ ವಿರುದ್ಧ ಸ್ಪರ್ಧೆ ಇಲ್ಲ ಎಂದು ಖಚಿತಪಡಿಸಿದ ಹ್ಯಾಲೆ 

ವಾಷಿಂಗ್ಟನ್(ಅ.9): ಮಹತ್ವದ ಬೆಳವಣಿಗೆಯೊಂದರಲ್ಲಿ ವಿಶ್ವಸಂಸ್ಥೆಯಲ್ಲಿನ ಅಮೆರಿಕ ರಾಯಭಾರಿ ನಿಕ್ಕಿ ಹ್ಯಾಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಅಚ್ಚರಿಯ ಬೆಳವಣಿಗೆಯನ್ನು ಖುದ್ದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ. 

ವರ್ಷಾಂತ್ಯದೊಳಗೆ ಭಾರತ ಸಂಜಾತೆ ನಿಕ್ಕಿ ಹ್ಯಾಲೆ ಟ್ರಂಪ್ ಆಡಳಿತವನ್ನು ತೊರೆಯಲಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ಟ್ರಂಪ್ ಅಂಗೀಕರಿಸಿದ್ದಾರೆ ಎಂದು ಅಮೆರಿಕ ಮಾಧ್ಯಮ ಸಂಸ್ಥೆ ಫಾಕ್ಸ್ ವರದಿ ಮಾಡಿದೆ.

Scroll to load tweet…

ಸಮರ್ಥ ರಾಯಭಾರಿ ನಿಕ್ಕಿ ಹ್ಯಾಲೆ ರಾಜೀನಾಮೆ ಹಿಂದಿರುವ ಕಾರಣಗಳು ತಿಳಿದು ಬಂದಿಲ್ಲ. ಆದಗ್ಯೂ ಟ್ರಂಪ್ ಆಡಳಿತವನ್ನು ತೊರೆದಿರುವ ಹಿರಿಯ ಅಧಿಕಾರಿಗಳ ಸಾಲಿಗೆ ಹ್ಯಾಲೆ ಸೇರ್ಪಡೆಯಾಗಿದ್ದಾರೆ. 

ಸೌತ್ ಕರೊಲಿನಾ ಮಾಜಿ ಗವರ್ನರ್ ನಿಕ್ಕಿ ಹ್ಯಾಲೆ ಅವರನ್ನು 2017 ಜನವರಿ ತಿಂಗಳಲ್ಲಿ ಡೋನಾಲ್ಡ್ ಟ್ರಂಪ್, ವಿಶ್ವಸಂಸ್ಥೆಯಲ್ಲಿನ ಅಮೆರಿಕ ರಾಯಭಾರಿ ಆಗಿ ನೇಮಕ ಮಾಡಿದ್ದರು. 

ಇನ್ನು ನಿಕ್ಕಿ ಹ್ಯಾಲೆ 2020 ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿರುದ್ಧ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದನ್ನು ಖುದ್ದು ಹ್ಯಾಲೆ ನಿರಾಕರಿಸಿದ್ದಾರೆ. ತಾವು ಟ್ರಂಪ್ ವಿರುದ್ಧ ಸ್ಪರ್ಧೆ ಮಾಡುತ್ತಿಲ್ಲ ಎಂದು ಹ್ಯಾಲೆ ಸ್ಪಷ್ಟಪಡಿಸಿದ್ದಾರೆ.