ಜಂಬೂ ಸವಾರಿ ವೇಳೆ ವೀಕಕರು ದರ್ಬಾರು ಹಾಲನ್ನು ಗಲೀಜು ಮಾಡಿದ್ದು ಜನರ ನಡವಳಿಕೆಯಿಂದ ನಮ್ಮ ಭಾವನೆಗಳಗೆ ಧಕ್ಕೆಯಾಗಿದೆ ಎಂದು ರಾಜ ವಂಶಸ್ಥ ಯದುವೀರ್ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರು (ಅ.14): ಜಂಬೂ ಸವಾರಿ ವೇಳೆ ವೀಕಕರು ದರ್ಬಾರು ಹಾಲನ್ನು ಗಲೀಜು ಮಾಡಿದ್ದು ಜನರ ನಡವಳಿಕೆಯಿಂದ ನಮ್ಮ ಭಾವನೆಗಳಗೆ ಧಕ್ಕೆಯಾಗಿದೆ ಎಂದು ರಾಜ ವಂಶಸ್ಥ ಯದುವೀರ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಚಿಕ್ಕವನಿದ್ದಾಗ ಅಲ್ಲಿಗೆ ಯಾರನ್ನೂ ಬಿಡುತ್ತಿರಲಿಲ್ಲ. ಕೇವಲ ರಾಜವಂಶಸ್ಥರು ಮಾತ್ರ ಅಲ್ಲಿ ಕೂತು ಜಂಬೂಸವಾರಿ ವೀಕ್ಷಣೆ ಮಾಡುತ್ತಿದ್ದೆವು. ಈಗ ಅದನ್ನು ವಿಐಪಿ ವಿಂಗ್ ಮಾಡಿ ಅವಕಾಶ ಕೊಟ್ಟಿದ್ದರು. ವೀಕ್ಷಣೆ ವೇಳೆ ತಿಂಡಿ ವ್ಯವಸ್ಥೆ ಕೂಡ ಇತ್ತು. ಆದರೆ ಅದನ್ನು ಒಂದೆಡೆ ಇಡಲು ಡಸ್ಟ್ಬಿನ್ ವ್ಯವಸ್ಥೆ ಇರಲಿಲ್ಲ. ವ್ಯವಸ್ಥೆ ಇಲ್ಲದೆ ಇದ್ದರೂ ಜನರು ಹಾಗೆ ಮಾಡಬಾರದಿತ್ತು. ದರ್ಬಾರ್ ಹಾಲ್ಗೆ ತುಂಬಾಪಾವಿತ್ರತೆ ಇದೆ. ಜನ ಅದನ್ನು ಅರ್ಥ ಮಾಡಿಕೊಳ್ಳಬೇಕು. ಮುಂದಾದರೂ ದಸರಾ ಆಚರಣೆ ಮುಂಚೆ ಜನರಲ್ಲಿ ತಿಳುವಳಿಕೆ ಮೂಡಿಸಲಿ ಎಂದಿದ್ದಾರೆ.
