Asianet Suvarna News Asianet Suvarna News

'ಸರವಣ ಭವನ'ದಿಂದ ಜೈಲಿಗೆ, ರಾಜಗೋಪಾಲ್ ಜೀವನದಲ್ಲಿ ಏನೇನಾಯ್ತು?

ಆತ ಬಡತನದಿಂದಲೇ ಮೇಲೆ ಬಂದವ.. ಅನೇಕ ಹೋರಾಟಗಳನ್ನು ಎದುರಿಸಿ ಜಯಶಾಲಿಯಾದವ.. ಹೋಟೆಲ್ ಉದ್ಯಮದಲ್ಲಿ ಮೈಲಿಗಲ್ಲು ಸಾಧಿಸಿದವ.. ಆದರೆ ಇಂದು ಜೈಲು ಸೇರಬೇಕಾದ ಸ್ಥಿತಿ ತಂದುಕೊಂಡಿದ್ದಾರೆ. ನಾವು ಹೇಳುತ್ತಿರುವುದು 'ಸರವಣ ಭವನ'ದ ಮಾಲೀಕ ಪಿ.ರಾಜಗೋಪಾಲ್ ಅವರ ಬಗ್ಗೆ.

The spectacular fall of the man P Rajagopal who founded Saravana Bhavan
Author
Bengaluru, First Published Jul 4, 2019, 8:27 PM IST
  • Facebook
  • Twitter
  • Whatsapp

ಚೆನ್ನೈ[ ಜು. 04]  ತಮ್ಮ ಹೋಟೆಲ್ ಉದ್ಯಮವನ್ನು ವಿದೇಶಗಳಿಗೂ ವ್ಯಾಪಿಸಿದ್ದ ಖ್ಯಾತ ಹೊಟೆಲ್ ಸಮೂಹ ಸಂಸ್ಥೆ 'ಸರವಣ ಭವನ'ದ ಮಾಲೀಕ ಪಿ.ರಾಜಗೋಪಾಲ್ ಮೂರು ದಿನದಲ್ಲಿ ಜೈಲು ಸೇರುತ್ತಿದ್ದಾರೆ.

ಪಿ.ರಾಜಗೋಪಾಲ್ ಮೊದಲಿಗೆ ಚೆನ್ನೈನಲ್ಲಿ ಸಣ್ಣದಾದ ಹೋಟೆಲ್ ಪ್ರಾರಂಭ ಮಾಡಿದ್ದರು, ಕೇವಲ ಮೂರು ದಶಕದಲ್ಲಿ ಅದನ್ನು ಬೃಹತ್ ಉದ್ಯಮವನ್ನಾಗಿ ಅದನ್ನು ಕಟ್ಟಿ ಬೆಳೆಸಿದರು. ದೇಶಾದ್ಯಂತ 33 ಕಡೆ ಸರವಣ ಭವನ ಹೊಟೆಲ್ ಇದೆ. ವಿದೇಶದಲ್ಲಿರುವ ಹೊಟೆಲ್ ಸೇರಿ ಒಟ್ಟು 47 ಹೊಟೆಲ್‌ಗಳ ಮಾಲೀಕರಾಗಿದ್ದವರು ರಾಜಗೋಪಾಲ್.

ಅದೊಂದು ಕೆಟ್ ಘಳೀಗೆ ರಾಜಗೋಪಾಲ್ ಮೇಲೆ ತಮ್ಮದೇ ಹೊಟೆಲ್ ಸಮೂಹದಲ್ಲಿ ಕೆಲಸದಲ್ಲಿದ್ದ ವ್ಯಕ್ತಿಯೊಬ್ಬರ ಮಗಳ ಗಂಡನನ್ನು ಹತ್ಯೆ ಮಾಡಿ ಮಾಡಿರುವ ಆರೋಪ ಎದುರಾಯಿತು. ಇದೀಗ ಆರೋಪ ಸಾಬೀತಾಗಿದ್ದು, ಅವರಿಗೆ ಅಮರಣಾಂತ ಜೈಲುವಾಸದ ಶಿಕ್ಷೆ ಆಗಿದ್ದು ಜುಲೈ 7 ರಿಂದ ಆರಂಭವಾಗಲಿದೆ.

ಜೀವಾವಧಿ ಶಿಕ್ಷೆಗೆ ಗುರಿಯಾದ ಉದ್ಯಮಿ ಮಾಡಿಕೊಂಡ ತಪ್ಪಾದರೂ ಏನು?

ಏನಿದು ಪ್ರಕರಣ: ಜ್ಯೋತಿಷಿ ಮಾತು ಕೇಳಿ ರಾಜಗೋಪಾಲ್, ತಮ್ಮ ಸಮೂಹದಲ್ಲಿ ಕೆಲಸದಲ್ಲಿದ್ದ ವ್ಯಕ್ತಿಯೊಬ್ಬರ ಮಗಳನ್ನು ಮೂರನೇ ಮದುವೆ ಆಗಲು ಯತ್ನಿಸಿದ್ದರು, ಆದರೆ ಆಕೆಗೆ ಈಗಾಗಲೇ ಮದುವೆ ಆಗಿತ್ತು. ಅವರ ಕುಟುಂಬಕ್ಕೆ ಬಹುವಾಗಿ ಕಾಟ ಕೊಟ್ಟ ಪಿ.ರಾಜಗೋಪಾಲ್ ಅಂತಿಮವಾಗಿ 2001 ರಲ್ಲಿ ಆಕೆಯ ಪತಿಯನ್ನು ಹತ್ಯೆ ಮಾಡಿಸಿದ್ದರು ಎಂಬ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದೆ.

ಕೆಳನ್ಯಾಯಾಲಯದ ತೀರ್ಪು ಎತ್ತಿ ಹಿಡಿದ ಸುಪ್ರೀಂ: 2004 ರವರೆಗೆ ನಡೆದ ವಿಚಾರಣೆಯಲ್ಲಿ ಪಿ.ರಾಜಗೋಪಾಲ್ ಅಪರಾಧಿ ಎಂಬುದು ಸಾಬೀತಾಗಿ, ಹತ್ತು ವರ್ಷ ಜೈಲು ಶಿಕ್ಷೆ ಆಗಿತ್ತು ನಂತರ ಅದೇ ಅಮರಣಾಂತ ಜೈಲು ಶಿಕ್ಷೆ ಆಗಿ ಬದಲಾಯಿತು.  ಪಿ.ರಾಜಗೋಪಾಲ್ ಪ್ರಕರಣವನ್ನು ಸುಪ್ರಿಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು ಕೆಳ ನ್ಯಾಯಾಲಯದ ಆದೇಶವೇ ಊರ್ಜಿತವಾಯಿತು.

ಜುಲೈ 7 ರ ವರೆಗೆ ರಾಜಗೋಪಾಲ್‌ಗೆ ಗಡುವು ನೀಡಿದ್ದು, ಅಷ್ಟರ ಒಳಗಾಗಿ ಅವರು ಪೊಲೀಸರಿಗೆ ಶರಣಾಗಿ ಜೈಲು ವಾಸ ಅನುಭವಿಸಬೇಕಾಗಿದೆ. ಸರವಣ ಹೋಟೆಲ್ ಮಾಲೀಕರ ಬಳಿ ಜೈಲು ಶಿಕ್ಷೆ ಅಲ್ಲದೇ ಬೇರೆ ಇನ್ನು ಯಾವ ಆಯ್ಕೆಯೂ ಉಳಿದುಕೊಂಡಿಲ್ಲ.

ಸರಳ ಜೀವನ: ಬಿಳಿ ಪಂಚೆ ಮತ್ತು ಶರ್ಟ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಜಗೋಪಾಲ್ ಅವರಿಗೆ ಈಗ 71 ವರ್ಷ ವಯಸ್ಸು. ಹಣೆಯ ಮೇಲೊಂದು ಗಂಧದ ತಿಲಕ  ರಾಜಗೋಪಾಲ್ ಅವರ ಟಿಪಿಕಲ್ ಶೈಲಿ.  1981 ರಲ್ಲಿ ಚೆನ್ನೈ ಅಂದರೆ ಆಗಿನ ಮದ್ರಾಸ್ ನಲ್ಲಿ ಸಣ್ಣ ಅಂಗಡಿ ಆರಂಭಿಸಿದ್ದರು.

ಉದ್ಯಮದ ಸಾಧನೆ:  ನಂತರ ನಿಧಾನವಾಗಿ ಹೋಟೆಲ್ ಉದ್ಯಮಕ್ಕೆ ಕಾಲಿರಿಸಿದರು. ದಕ್ಷಿಣ ಭಾರತದ ತಿಂಡಿಗಳಾದ ದೋಸಾ, ವಡಾ  ಸರವಣ ಭವನದ ಕೈ ಹಿಡಿಯಿತು. ಅಲ್ಲಿಂದ ರಾಜಗೋಪಾಲ್ ಹಿಂದೆ ತಿರುಗಿ ನೋಡಲೇ ಇಲ್ಲ. ಹೋಟೆಲ್ ಉದ್ಯಮದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ತಂದವರು ರಾಜಗೋಪಾಲ್ ಎಂಬ ಮಾತುಗಳು ಕೇಳಲಾರಂಭಿಸಿದವು.

ವಿದೇಶದಲ್ಲೂ ಖ್ಯಾತಿ:  ಭಾರತದ ರುಚಿಯನ್ನು ಭಾರತದ ಹೊರಗೆ ಪರಿಚಯಿಸಿದ ಕೀರ್ತಿ ಸಹ ರಾಜಗೋಪಾಲ್ ಅವರಿಗೆ ಸಲ್ಲುತ್ತದೆ. ಭಾರತೀಯರು ಹೆಚ್ಚಾಗಿರುವ ಯುಎಸ್ ಎ, ಗಲ್ಫ್ ದೇಶಗಳು, ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಸರವಣ ಭವನ ಹೆಸರಾಯಿತು.

ಮಕ್ಕಳಂತೆ ಕಂಡರು:  ತನ್ನ ಸಂಸ್ಥೆಯ ಸಿಬ್ಬಂದಿಯನ್ನು ಮಕ್ಕಳಂತೆ ಕಂಡರು ಎಂಬ ಮಾತು ಇದೆ.ಆರೋಗ್ಯ ವಿಮೆಯನ್ನು ಕಡಿಮೆ ಸಂಬಳದ ನೌಕರರಿಗೆ ನೀಡಿ ‘ಅನ್ನಾಚಿ’ ಎಂದು ಕರೆಸಿಕೊಂಡರವರು ರಾಜಗೋಪಾಲ್. ಇಂಥ ರಾಜಗೋಪಾಲ್ ಇಂದು ಜೈಲಿಗೆ ಹೊರಟು ನಿಂತಿದ್ದಾರೆ. ಬಹುಷಃ ಅವರ ಕೊನೆಯ ದಿನಗಳನ್ನು ಜೈಲಿನಲ್ಲಿಯೇ ಕಳೆಯಬೇಕಾಗುತ್ತದೆ.

 

Follow Us:
Download App:
  • android
  • ios