ಮೋದಿ ಶಪಥ ರಾತ್ರಿ 7ಕ್ಕೇ ಏಕೆ?: ಶುಭ ಮುಹೂರ್ತವಲ್ಲ, ಕಾರಣ ಬೇರೆಯೇ ಇದೆ!| ರಾಷ್ಟ್ರಪತಿ ಭವನದ ಮುಂಭಾಗ ಶಪಥ ಸ್ವೀಕರಿಸುತ್ತಿರುವ ನಾಲ್ಕನೇ ಪ್ರಧಾನಿ

ನವದೆಹಲಿ[ಮೇ.30]: ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ಸಾಮಾನ್ಯವಾಗಿ ಪ್ರಧಾನಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತದೆ. ಆದರೆ ಮೋದಿ ಅವರು ರಾಷ್ಟ್ರಪತಿ ಭವನದ ಮುಂಭಾಗ ಕಳೆದ ಬಾರಿ ಶಪಥ ಗ್ರಹಣ ಮಾಡಿದ್ದರು. ಈ ಬಾರಿಯೂ ಅವರು ಅದೇ ಸ್ಥಳ ಆಯ್ಕೆ ಮಾಡಿಕೊಂಡಿದ್ದಾರೆ. ತನ್ಮೂಲಕ ರಾಷ್ಟ್ರಪತಿ ಭವನದ ಹೊರಾಂಗಣದಲ್ಲಿ ಪ್ರಮಾಣ ಸ್ವೀಕರಿಸಿದ ದೇಶದ 4ನೇ ಪ್ರಧಾನಿ ಎನಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಬಾರಿ ಸಂಜೆ 6ಕ್ಕೆ ಶಪಥ ಸ್ವೀಕರಿಸಿದ್ದ ಮೋದಿ ಅವರು ಈ ಬಾರಿ ರಾತ್ರಿ 7ರ ಸಮಯವನ್ನು ಆಯ್ದುಕೊಂಡಿರುವುದೇಕೆ ಎಂಬ ಕುತೂಹಲವಿದೆ. ಸಾಮಾನ್ಯವಾಗಿ ಮುಖ್ಯಮಂತ್ರಿ, ಪ್ರಧಾನಿಯಾಗುವವರು ಶಪಥಗ್ರಹಣದ ಶುಭ ಮುಹೂರ್ತಕ್ಕಾಗಿ ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಮೋದಿ ಅವರು ರಾತ್ರಿ 7ರ ಸಮಯ ನಿಗದಿಗೆ ಬೇರೆಯದೇ ಕಾರಣಗಳು ಇವೆ ಎಂದು ಕೆಲ ವರದಿಗಳು ತಿಳಿಸಿವೆ.

ಕಳೆದ ಬಾರಿ ಸಂಜೆ ೬ಕ್ಕೆ ಸಮಾರಂಭ ಆರಂಭವಾಗಿತ್ತು. ಅದರಲ್ಲಿ ಭಾಗವಹಿಸಲು ಸಂಜೆ 4-4.30ರಿಂದಲೇ ಗಣ್ಯರು ಆಸೀನರಾಗಿದ್ದರು. ದೆಹಲಿಯಲ್ಲಿ ರಣಭಯಂಕರ ಬಿಸಿಲು. ರಾಷ್ಟ್ರಪತಿ ಭವನದೊಳಕ್ಕೆ ನೀರಿನ ಬಾಟಲಿಯನ್ನೂ ಒಯ್ಯುವಂತಿಲ್ಲ. ಸಮಸ್ಯೆಯಾಗಿತ್ತು. ಆದ ಕಾರಣ ಈ ಬಾರಿ ರಾತ್ರಿ ೭ರ ಸಮಯ ನಿಗದಿಗೊಳಿಸಲಾಗಿದೆ. ಕುಡಿಯುವ ನೀರು ಒದಗಿಸಲೂ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.