ವಿಕ್ಟೋರಿಯಾ ಆಸ್ಪತ್ರೆ ನೂತನ ಕಟ್ಟಡಗಳ ಉದ್ಘಾಟನೆ ವೇಳೆ ಸಿಎಂ ಸಿದ್ದರಾಮಯ್ಯ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲರ ಕಾಲೆಳೆದ ಹಾಸ್ಯ ಪ್ರಸಂಗ ನಡೆಯಿತು. ಅಲ್ಲದೇ ಇದೇ ವೇಳೆ ಸಿದ್ದರಾಮಯ್ಯ ತಮ್ಮ ಪಂಚೆಯ ರಹಸ್ಯವನ್ನ ಸಹ ಬಿಚ್ಚಿಟ್ಟರು.
ಬೆಂಗಳೂರು(ಸೆ.15): ವಿಕ್ಟೋರಿಯಾ ಆಸ್ಪತ್ರೆ ನೂತನ ಕಟ್ಟಡಗಳ ಉದ್ಘಾಟನೆ ವೇಳೆ ಸಿಎಂ ಸಿದ್ದರಾಮಯ್ಯ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲರ ಕಾಲೆಳೆದ ಹಾಸ್ಯ ಪ್ರಸಂಗ ನಡೆಯಿತು. ಅಲ್ಲದೇ ಇದೇ ವೇಳೆ ಸಿದ್ದರಾಮಯ್ಯ ತಮ್ಮ ಪಂಚೆಯ ರಹಸ್ಯವನ್ನ ಸಹ ಬಿಚ್ಚಿಟ್ಟರು.
ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶರಣಪ್ರಕಾಶ ಪಾಟೀಲ್ ಡರ್ಮಟಾಲಜಿಸ್ಟ್ . ಅಂದರೆ ಚರ್ಮ ರೋಗ ತಜ್ಞ. ಆದರೆ ಅವರು ಯಾವ ರೋಗಿಗೂ ಸಹಾಯ ಮಾಡಿದಂತೆ ಕಾಣಲ್ಲ. ನನಗೂ ಒಣ ಚರ್ಮದ ಸಮಸ್ಯೆ ಇತ್ತು. ಚಳಿಗಾಲ ಬಂತು ಅಂದ್ರೆ ತುಂಬಾ ಕಷ್ಟವಾಗುತ್ತಿತ್ತು. ಯಾವ ವೈದ್ಯರೂ ರೋಗಕ್ಕೆ ಕಾರಣ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಕೊನೆಗೊಬ್ಬ ವೈದ್ಯರು ಪ್ಯಾಂಟ್ ಧರಿಸುವುದನ್ನು ನಿಲ್ಲಿಸಿ, ಪಂಚೆ ಧರಿಸಲು ಸಲಹೆ ಮಾಡಿದ್ದರು. ಚೆನ್ನಾಗಿ ಗಾಳಿಯಾಡಿದ್ರೆ ಸರಿ ಹೋಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ರು. ಈಗ ಅದು ಸರಿ ಹೋಯ್ತು. ಆದ್ದರಿಂದ ನಾನು ಯಾರನ್ನೂ ಅನುಕರಣೆ ಮಾಡಲು ಪಂಚೆ ಉಡುತ್ತಿಲ್ಲ. ಬದಲಾಗಿ ಆರೋಗ್ಯದ ಕಾರಣಕ್ಕೆ ಪಂಚೆ ಧರಿಸುತ್ತಿದ್ದೇನೆ ಅಂತ ಸಿಎಂ ಸಿದ್ದರಾಮಯ್ಯ ತಮ್ಮ ಪಂಚೆಯ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ.
