22 ವರ್ಷದ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಆ್ಯಪ್'ನ್ನು ಹ್ಯಾಕ್ ಮಾಡಿದ ವಿಚಾರ ದೇಶದಾದ್ಯಂತ ಸದ್ದು ಮಾಡಿತ್ತು. ಮೋದಿ ಆ್ಯಪ್ ಹ್ಯಾಕ್ ಮಾಡಿದ ಮುಂಬೈನ ಜಾವೆದ್ ಖತ್ರಿ ಹೆಸರಿನ ಈ ಯುವಕ ತಾನು ಹೀಗೆ ಮಾಡಿ 'ಈ ಆ್ಯಪ್'ಗೆ ಅದೆಷ್ಟು ಭದ್ರತೆ ಇದೆ ಎಂಬುವುದನ್ನು ಎಲ್ಲರಿಗೂ ಮನದಟ್ಟು ಮಾಡಿದ್ದೇನೆ' ಎಂದಿದ್ದಾನೆ.

ಮುಂಬೈ(ಡಿ.07): 22 ವರ್ಷದ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಆ್ಯಪ್'ನ್ನು ಹ್ಯಾಕ್ ಮಾಡಿದ ವಿಚಾರ ದೇಶದಾದ್ಯಂತ ಸದ್ದು ಮಾಡಿತ್ತು. ಮೋದಿ ಆ್ಯಪ್ ಹ್ಯಾಕ್ ಮಾಡಿದ ಮುಂಬೈನ ಜಾವೆದ್ ಖತ್ರಿ ಹೆಸರಿನ ಈ ಯುವಕ ತಾನು ಹೀಗೆ ಮಾಡಿ 'ಈ ಆ್ಯಪ್'ಗೆ ಅದೆಷ್ಟು ಭದ್ರತೆ ಇದೆ ಎಂಬುವುದನ್ನು ಎಲ್ಲರಿಗೂ ಮನದಟ್ಟು ಮಾಡಿದ್ದೇನೆ' ಎಂದಿದ್ದಾನೆ.

ಈ ಕುರಿತಾಗಿ ಮಾತನಾಡಿದ ಜಾವೆದ್ 'ಪ್ರಧಾನಿ ಮೋದಿ ಆ್ಯಪ್'ನಲ್ಲಿ ಸುರಕ್ಷಾ ಲೋಪವಿದೆ ಹಾಗೂ ಇದನ್ನು ಬಳಸುವ ಸುಮಾರು 70 ಲಕ್ಷ ಬಳಕೆದಾರರ ಡಾಟಾ ಅಪಾಯದಲ್ಲಿದೆ. ಹೀಗಾಗಿ ಸರ್ಕಾರದ ಗಮನ ಈ ವಿಚಾರದ ಮೇಲಿರಲಿ ಎಂದು ನಾನು ಈ ಆ್ಯಪ್'ನ್ನು ಹ್ಯಾಕ್ ಮಾಡಿದೆ' ಎಂದಿದ್ದಾನೆ.

ಕೆಲದಿನಗಳ ಹಿಂದಷ್ಟೇ ಜಾರಿಗೊಳಿಸಿದ್ದ ನೋಟ್ ಬ್ಯಾನ್ ವಿಚಾರದ ಕುರಿತಾಗಿ ಜನರ ಅಭಿಪ್ರಾಯ ತಿಳಿದುಕೊಳ್ಳುವ ವಿಚಾರದಲ್ಲಿ ಈ ಆ್ಯಪ್ ಚರ್ಚೆಯಲ್ಲಿತ್ತು. ನೋಟ್ ಬಂದ್ ವಿಚಾರವಾಗಿ ಜನರ ಅಭಿಪ್ರಾಯ ತಿಳಿದುಕೊಳ್ಳಲು ಈ ಆ್ಯಪ್'ನಲ್ಲಿ 10 ಪ್ರಶ್ನೆಗಳನ್ನು ಕೇಳಲಾಗಿತ್ತು ಹಾಗೂ ಈ ಸರ್ವೆಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು.

ಈ ಕುರಿತಾಗಿ ಡಿಸೆಂಬರ್ 1ರಂದು ಜಾವೆದ್ ಈ ವಿಚಾರವಾಗಿ ಮಾಹಿತಿ ನೀಡಿದ್ದಲ್ಲದೆ 'ನರೇಂದ್ರ ಮೋದಿಯವರೇ ನಾನು ನಿಮ್ಮ ಆ್ಯಪ್'ನಲ್ಲಿ ಸುರಕ್ಷಾ ಲೋಪವಿರುವುದನ್ನು ಗಮನಿಸಿದ್ದೇನೆ. ಈ ಕುರಿತಾಗಿ ನಿಮಗೆ ತಿಳಿಸಲಿಚ್ಛಿಸುತ್ತೇನೆ. ಈ ಆ್ಯಪ್'ನಲ್ಲಿರುವ ದೋಷದಿಂದ ಯಾವುದೇ ಒಬ್ಬ ಬಳಕೆದಾರನನ್ನು ಬೇರೊಬ್ಬನನ್ನು ಫಾಲೋ ಮಾಡುವಂತೆ ಮಾಡಬಹುದು. ಇದು ಈ ಆ್ಯಪ್'ನಲ್ಲಿರುವ ಬಹುದೊಡ್ಡ ದೋಷ. ಇದನ್ನು ನೀವು ಕಡೆಗಣಿಸಿದರೆ 70ಲಕ್ಷಕ್ಕೂ ಅಧಿಕ ಬಳಕೆದಾರರ ಗೌಪ್ಯ ವಿಚಾರಗಳು ಸಾರ್ವಜನಿಕವಾಗುವ ಸಾಧ್ಯತೆಗಳಿವೆ' ಎಂದು ಟ್ವೀಟ್ ಮಾಡಿದ್ದ.

ಇದಾದ ಬಳಿಕ ಮತ್ತೆ ಟ್ವೀಟ್ ಮಾಡಿದ್ದ ಜಾವೆದ್ 'ಆ್ಯಪ್'ನಲ್ಲಿರುವ ದೋಷಗಳನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದೆ. ನಾನು ಇದಕ್ಕೆ ಸಂಬಂಧಪಟ್ಟವರ ಸಂಪರ್ಕದಲ್ಲಿದ್ದೇನೆ ಹಾಗೂ ನಾಣು ಈ ಆ್ಯಪ್'ನ್ನು ಸಂಪೂರ್ಣವಾಗಿ ಹ್ಯಾಕ್ ಮಾಡಿರಲಿಲ್ಲ. ಈ ದೋಷಗಳನ್ನು ಸರಿಪಡಿಸಲು ಕೆಲವೊಂದು ಸಲಹೆಗಳನ್ನೂ ನೀಡಿದ್ದೆ' ಎಂದಿದ್ದಾನೆ.

ಬಿಜೆಪಿಯ ಐಟಿ ಸೆಲ್ ಕೂಡಾ ಈ ಕುರಿತಾಗಿ ಸ್ಪಷ್ಟನೆ ನೀಡಿ' ಬಳಕೆದಾರರ ವಿಚಾರಗಳು ಇನ್ಮುಂದೆ ಎನ್'ಕ್ರಿಪ್ಟ್ ಆಗಿರುತ್ತವೆ' ಎಂದಿದ್ದಾರೆ.