ಬೆಲ್ಜಿಯಂ[ಜು.15]: ಟಾಯ್ಲೆಟ್‌ನಲ್ಲಿ ಜನರು ಎಷ್ಟುಹೊತ್ತು ಕೂರಲು ಸಾಧ್ಯ? ಅಬ್ಬಬ್ಬಾ ಅಂದರೂ ಒಂದು ಗಂಟೆ. ಆ ಬಳಿಕ ಆಚೆ ಬಂದೇ ಬರುತ್ತಾರೆ. ಆದರೆ, ಬೆಲ್ಜಿಯಂನ ಜಿಮ್ಮಿ ಡಿ ಫ್ರೆನ್ನೆ ಎಂಬಾತ ಬಾರ್‌ವೊಂದರ ಮಧ್ಯೆ 5 ದಿನಗಳ ಕಾಲ ಟಾಯ್ಲೆಟ್‌ನ ಕಮೋಡ್‌ ಮೇಲೆ ಕುಳಿತಿದ್ದಾನೆ.

ಅಷ್ಟಕ್ಕೂ ಈತ ಇಷ್ಟೆಲ್ಲಾ ಮಾಡಿದ್ದು ದಾಖಲೆಗಾಗಿ. ಅತಿಹೆಚ್ಚು ಹೊತ್ತು ಟಾಯ್ಲೆಟ್‌ ಮೇಲೆ ಕುಳಿತ ದಾಖಲೆ ನಿರ್ಮಿಸಲು 165 ಗಂಟೆಗಳ ಕಾಲ ಟಾಯ್ಲೆಟ್‌ ಮೇಲೆ ಕೂರುವ ಸವಾಲು ಸ್ವೀಕರಿಸಿದ್ದಾನೆ.

ಈ ಐದು ದಿನದಲ್ಲಿ ಊಟ ತಿಂಡಿ ನಿದ್ದೆ ಎಲ್ಲವನ್ನೂ ಟಾಯ್ಲೆಟ್‌ ಮೇಲೆಯೇ ಮಾಡಿದ್ದಾನೆ.