ಅನಂತಕುಮಾರ್ ಅವರು ಎಬಿವಿಪಿ ಕಾರ್ಯದರ್ಶಿಯಿಂದ ಹಿಡಿದು ಕೇಂದ್ರ ಸಚಿವರಾಗುವವರೆಗೆ ಅವರು ಹಲವು ಹುದ್ದೆಗಳನ್ನ ನಿರ್ವಹಿಸಿದ್ದು, 'ಅನಂತ'​ ಸಾಧನೆಗಳ ಒಂದು ನೋಟ ಇಲ್ಲಿದೆ.

ಬೆಂಗಳೂರು, [ನ.12]: ಕೇಂದ್ರ ಸಚಿವ ಅನಂತ್​ಕುಮಾರ್ ಇಂದು​ [ಸೋಮವಾರ] ವಿಧಿವಶರಾಗಿದ್ದಾರೆ. ಸಂಸದೀಯ ವ್ಯವಹಾರಗಳು ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್, ರಾಜಕೀಯವಾಗಿ ಬಿಜೆಪಿ ಪಕ್ಷವನ್ನು ಬೆಳಸಿದವರಲ್ಲಿ ಒಬ್ಬರು. 

Add Asianetnews Kannada as a Preferred SourcegooglePreferred

ಅಗಲಿದ ಕೇಂದ್ರ ಸಚಿವ ಅನಂತಕುಮಾರ್ ಸಂಕ್ಷಿಪ್ತ ಪರಿಚಯ

ಅಷ್ಟೇ ಅಲ್ಲದೇ ಕರ್ನಾಟಕಕ್ಕೂ ಕೇಂದ್ರ ಸರ್ಕಾರಕ್ಕೂ ಸಂಪರ್ಕ ಸೇತುವೆಯಾಗಿದ್ದರು. ಎಬಿವಿಪಿ ಕಾರ್ಯದರ್ಶಿಯಿಂದ ಹಿಡಿದು ಕೇಂದ್ರ ಸಚಿವರಾಗುವವರೆಗೆ ಅವರು ಹಲವು ಹುದ್ದೆಗಳನ್ನ ನಿರ್ವಹಿಸಿದ್ದರು. ಅವುಗಳ ಒಂದು ನೊಟ ಇಲ್ಲಿದೆ.

Live Updates: ಕೇಂದ್ರ ಸಚಿವ ಅನಂತ ಕುಮಾರ್ ಅಸ್ತಂಗತ

1982-85 : ಎಬಿವಿಪಿ ರಾಜ್ಯ ಘಟಕದ ಕಾರ್ಯದರ್ಶಿ
1985-87 : ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ
1987-88 : ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ
1988-95 : ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
1995- 98 : ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ
1996 : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆ
1996-97 : ಕೈಗಾರಿಕಾ ಸಲಹಾ ಸಮಿತಿ ಹಾಗೂ ರೈಲ್ವೆ ಸ್ಥಾಯಿ ಸಮಿತಿ ಸದಸ್ಯ
1998 : ಲೋಕಸಭೆಗೆ ಎರಡನೇ ಬಾರಿಗೆ ಪುನರಾಯ್ಕೆ
1998-1999 : ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ
1999 : ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಹೊಣೆ
1999 : ಮೂರನೇ ಬಾರಿಗೆ ಸಂಸದರಾಗಿ ಆಯ್ಕೆ
1999-2000: ಕೇಂದ್ರ ಸಂಸ್ಕೃತಿ ಹಾಗೂ ಯುವ ಸಬಲೀಕರಣ ಸಚಿವ
2000 : ಸಂಸ್ಕೃತಿ ಇಲಾಖೆ ಜತೆಗೆ ಪ್ರವಾಸೋದ್ಯಮ
2000 : ನಗರಾಭಿವೃದ್ಧಿ, ಬಡತನ ನಿರ್ಮೂಲನೆ, ಗ್ರಾಮೀಣಾಭಿವೃದ್ಧಿ ಇಲಾಖೆ
2003 : ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ
2004 : ಬೆಂಗಳೂರು ದಕ್ಷಿಣ ಕ್ಷೇತ್ರದಿಂದ 4ನೇ ಬಾರಿಗೆ ಆಯ್ಕೆ
2004-08 : ಸಂಸತ್ತಿನ ಉಕ್ಕು ಸಮಿತಿ ಅಧ್ಯಕ್ಷ
2004 : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
2005 : ಲಾಭದಾಯಕ ಹುದ್ದೆಗೆ ಸಂಬಂಧಿಸಿದ ಸಂಸತ್ತಿನ ಜಂಟಿ ಸಮಿತಿ ಸದಸ್ಯ
2007 : ಸಂಸತ್ತಿನ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ, ಕಲಾಪ ಸಲಹಾ ಸಮಿತಿ ಸದಸ್ಯ
2009 : ಐದನೇ ಬಾರಿಗೆ ಸಂಸದರಾಗಿ ಆಯ್ಕೆ
2009 : ರಸಗೊಬ್ಬರ ಹಾಗೂ ಔಷಧ ಸ್ಥಾಯಿ ಸಮಿತಿ ಅಧ್ಯಕ್ಷ
2009 : ಹಕ್ಕು ಭಾದ್ಯತೆ ಮತ್ತು ಕಾಯ್ದೆ ಸಮಿತಿ ಸದಸ್ಯ
2010 : ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ
2014 : 6ನೇ ಬಾರಿಗೆ ಸಂಸದರಾಗಿ ಆಯ್ಕೆ, ಮೋದಿ ಸಂಪುಟದಲ್ಲಿ ರಸಗೊಬ್ಬರ ಹಾಗೂ ಔಷಧ ಇಲಾಖೆ ಸಚಿವ
2016 : ಕೇಂದ್ರ ಸಂಸದೀಯ ವ್ಯವಹಾರ ಇಲಾಖೆ ಹೆಚ್ಚುವರಿ ಹೊಣೆ