ಬಹು ನಿರೀಕ್ಷಿತ, ಹೈದ್ರಾಬಾದ್​-ಕರ್ನಾಟಕದ ಜನರ ದಶಕಗಳ ಕನಸು ನನಸಾಗಲು ದಿನಗಣನೆ ಶುರುವಾಗಿದೆ,. ಮಹತ್ವದ ಬೀದರ್-ಕಲಬುರಗಿ ರೈಲ್ವೆ ಮಾರ್ಗ ಸಂಚಾರಕ್ಕೆ ಸಿದ್ಧವಾಗಿದ್ದು. ಈ ಕುರಿತು ನಮ್ಮ ಬೀದರ್ ರಿಪೋರ್ಟ್ ಲಿಂಗೇಶ್ ಮರಕಲೆ ನೀಡಿರುವ  ಒಂದು ವರದಿ ಇಲ್ಲಿದೆ ನೋಡಿ.

ಬೀದರ್(ಅ.24): ಹೈದರಾಬಾದ್ ಕರ್ನಾಟಕ ಭಾಗದ ಜನರ ದಶಕದ ಕನಸು ನನಸಾಗೋಕೆ ದಿನಗಣನೆ ಶುರುವಾಗಿದೆ. ಕಲಬುರಗಿ ಹಾಗೂ ಬೀದರ್ ನಡುವಿನ ರೈಲ್ವೆ ಸಂಚಾರಕ್ಕೆ ಇದೇ 29ರಂದು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಇದಕ್ಕಾಗಿ ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೈ-ಕ ಕನಸಿನ ರೈಲು ಯೋಜನೆ..!

ಬೀದರ್-ಕಲಬುರಗಿ ರೈಲು ಮಾರ್ಗ ಹೈದರಾಬಾದ್ ಕರ್ನಾಟಕ ಭಾಗದ ಮಹತ್ವದ ಯೋಜನೆ. ಬರೋಬ್ಬರಿ 110 ಕಿ.ಮೀ ಮಾರ್ಗದ ಈ ಯೋಜನೆ 1999ರಿಂದ ನೆನೆಗುದಿಗೆ ಬಿದ್ದಿತ್ತು..ಈದೀಗ ಪೂರ್ಣಗೊಂಡಿದೆ. ಬೀದರ್​ನಿಂದ ಕಲಬುರಗಿವರೆಗಿನ ಈ ಮಾರ್ಗದಲ್ಲಿ 13 ರೈಲ್ವೆ ನಿಲ್ದಾಣಗಳು ಬರಲಿವೆ. ಈಗಾಗಲೇ ಬೀದರ್ ನಿಂದ ಹುಮನಾಬಾದ್ ವರೆಗೆ ಸಂಚಾರ ಮುಕ್ತವಾಗಿದ್ದು ಈ ಮಾರ್ಗದಲ್ಲಿ ರೈಲು ಸಂಚರಿಸುತ್ತಿದೆ. ಕಮಲಾಪುರದಿಂದ ಕಲಬುರಗಿವರೆಗೆ ಬಾಕಿಯಿದ್ದ ಕಾಮಗಾರಿಯೂ ಈಗ ಪೂರ್ಣಗೊಂಡಿದೆ.

ಒಟ್ಟಿನಲ್ಲಿ ಇದೇ 29ರಂದು ಹೈ-ಕ ಭಾಗದ ಕನಸಿನ ಯೋಜನೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಲಿದ್ದು.. ಈ ಮಾರ್ಗ ಉದ್ಘಾಟನೆಯಿಂದ ದೆಹಲಿ ಪ್ರಯಾಣಿಕರಿಗೆ 7 ಗಂಟೆ ಉಳಿತಾಯವಾದರೆ. ರಾಜ್ಯ ರಾಜಧಾನಿ ಬೆಂಗಳೂರಿಗೆ ಬರೋ ಪ್ರಯಾಣಿಕರಿಗೂ ಅನುಕೂಲವಾಗಲಿದೆ.