ಭಾರೀ ಸಾಲದ ಸುಳಿಯಲ್ಲಿ ಅನಿಲ್ ಅಂಬಾನಿ

First Published 13, May 2018, 9:31 AM IST
The biggest ever sale of Indian corporate assets
Highlights

ಒಂದೆಡೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಭಾರತದ ನಂ.1 ಶ್ರೀಮಂತರಾಗಿ ಹೊರಹೊಮ್ಮಿದ್ದರೆ, ಅವರ ಸೋದರ ಅನಿಲ್ ಅಂಬಾನಿ ಒಡೆತನದ ಕಂಪನಿಗಳು ಬರೋಬ್ಬರಿ 60,000 ಕೋಟಿ ರು. ಸಾಲದ ಸುಳಿಗೆ ಸಿಕ್ಕಿವೆ. 

ಮುಂಬೈ: ಒಂದೆಡೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಭಾರತದ ನಂ.1 ಶ್ರೀಮಂತರಾಗಿ ಹೊರಹೊಮ್ಮಿದ್ದರೆ, ಅವರ ಸೋದರ ಅನಿಲ್ ಅಂಬಾನಿ ಒಡೆತನದ ಕಂಪನಿಗಳು ಬರೋಬ್ಬರಿ 60,000 ಕೋಟಿ ರು. ಸಾಲದ ಸುಳಿಗೆ ಸಿಕ್ಕಿವೆ. 

ಹೀಗಾಗಿ ಬೇರೆ ದಾರಿ ಕಾಣದ ರಿಲಯನ್ಸ್ ಗ್ರೂಪ್,  ದಕ್ಷಿಣ ಮುಂಬೈನ ದುಬಾರಿ ಬಲ್ಲಾರ್ಡ್ ಎಸ್ಟೇಟ್‌ನ ರಿಲಯನ್ಸ್ ಸೆಂಟರ್ ನಲ್ಲಿದ್ದ ತನ್ನ ಕೇಂದ್ರ ಕಚೇರಿಯನ್ನು ಸಾಂತಾಕ್ರೂಜ್‌ಗೆ ವರ್ಗಾಯಿಸಿದೆ. 

ಹಳೆಯ ಹೆಡ್‌ಆಫೀಸ್ ಜಾಗದಲ್ಲಿ ಮಾಸಿಕ 10 ಲಕ್ಷ ರು.ವರೆಗೆ ಬಾಡಿಗೆ ಸಿಗುವ ಸಾಧ್ಯತೆ ಇದ್ದು, ಅದನ್ನು ಕಂಪನಿಗೆ ಬಾಡಿಗೆಗೆ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸಾಲ ತೀರಿಸುವ ಸಲುವಾಗಿ ಅಂಬಾನಿ ಈಗಾಗಲೇ ಹಲವು ಕಂಪನಿಗಳ ಪಾಲು ಮಾರಾಟ ಮಾಡಿದ್ದಾರೆ

loader