Asianet Suvarna News Asianet Suvarna News

ಕುಡಿಯುವ ನೀರಿನ ಅಭಾವ: 11 ಜಾಗತಿಕ ನಗರಗಳ ಪಟ್ಟಿಯಲ್ಲಿ ಬೆಂಗಳೂರು!

  • ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಪ್ರಮುಖ ನಗರವಾಗಿರುವ ಕೇಪ್ ಟೌನ್ ಕುಡಿಯುವ ನೀರಿನ ಅಭಾವದ ಕಾರಣಕ್ಕೆ ಭಾರೀ ಸದ್ದು ಮಾಡಿತ್ತು
  • ಶೀಘ್ರದಲ್ಲೇ ಕುಡಿಯುವ ನೀರಿನ ಅಭಾವವನ್ನು ಎದುರಿಸಲಿರುವ 11 ಜಾಗತಿಕ ನಗರಗಳ ಪಟ್ಟಿ ಬಿಡುಗಡೆ ಮಾಡಿದೆ ಬಿಬಿಸಿ
The 11 cities most likely to run out of drinking water like Cape Town

ಬೆಂಗಳೂರು: ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಪ್ರಮುಖ ನಗರವಾಗಿರುವ ಕೇಪ್ ಟೌನ್ ಕುಡಿಯುವ ನೀರಿನ ಅಭಾವದ ಕಾರಣಕ್ಕೆ ಭಾರೀ ಸದ್ದು ಮಾಡಿತ್ತು.

ಇದೀಗ ಬಿಬಿಸಿಯು ಶೀಘ್ರದಲ್ಲೇ ಕುಡಿಯುವ ನೀರಿನ ಅಭಾವವನ್ನು ಎದುರಿಸಲಿರುವ 11 ಜಾಗತಿಕ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಆ ವರದಿಯ ಪ್ರಕಾರ ಭಾರತದ ನಗರಗಳ ಪೈಕಿ ಬೆಂಗಳೂರಿನ ಹೆಸರನ್ನು ಕೂಡಾ ಬಿಬಿಸಿ ಪಟ್ಟಿ ಮಾಡಿದೆ.

ಜಾಗತಿಕ ಭೂಪಟದಲ್ಲಿ ತಂತ್ರಜ್ಞಾನ ಹಾಗೂ ಐಟಿ ಹಬ್ ಆಗಿ ಬೆಳೆದಿರುವ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಅರ್ಧದಷ್ಟು ಕುಡಿಯುವ ನೀರು ಪೋಲಾಗುತ್ತಿದೆ, ಹಾಗೂ ಜಲ ಮಾಲಿನ್ಯ ಹೆಚ್ಚಾಗಿರುವುದು ನೀರಿನ ಅಭಾವಕ್ಕೆ ಕಾರಣವಾಗಿದೆಯೆಂದು ವರದಿಯು ಹೇಳಿದೆ.

ನಗರದ ಶೇ. 85 ಕೆರೆ ನೀರು, ಕೃಷಿ ಹಾಗೂ ಕೈಗಾರಿಕಾ ಬಳಕೆಗೆ ಮಾತ್ರ ಸೂಕ್ತವಾಗಿದೆ. ನಗರದ ಒಂದೇ ಒಂದು ಕೆರೆಯ ನೀರು ಕೂಡಾ ಕುಡಿಯಲು ಅಥವಾ ಸ್ನಾನಕ್ಕೆ ಬಳಸಲು ಯೋಗ್ಯವಾಗಿಲ್ಲ, ಎಂದು ವರದಿಯು ಹೇಳಿದೆ.

ಇತರ ನಗರಗಳು:

ಬ್ರೆಝಿಲ್’ನ ವಾಣಿಜ್ಯ ನಗರಿ ಸಾವೋ ಪೌಲೋ

ಚೀನಾ ರಾಜಧಾನಿ ಬೀಜಿಂಗ್

ಈಜಿಪ್ಟ್ ರಾಜಧಾನಿ ಕೈರೋ

ಇಂಡೋನೆಶಿಯಾ ರಾಜಧಾನಿ ಜಕಾರ್ತ

ಮಾಸ್ಕೋ, ರಷ್ಯಾ

ಇಸ್ತಾಂಬುಲ್, ಟರ್ಕಿ

ಮೆಕ್ಸಿಕೋ ಸಿಟಿ

ಲಂಡನ್

ಟೋಕಿಯೋ

ಮಿಯಾಮಿ

Follow Us:
Download App:
  • android
  • ios