ವಾಷಿಂಗ್ಟನ್[ಮಾ.16]: ಟೆಕ್ಸಾಸ್ ನ ಹ್ಯೂಸ್ಟನ್ ನಲ್ಲಿ ಮಹಿಳೆಯೊಬ್ಬಳು ಒಂದೇ ಬಾರಿ 6 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇಂತಹ ಪ್ರಕರಣ ಬಹಳ ಅಪರೂಪ, 4.7 ಬಿಲಿಯನ್ ನಲ್ಲಿ ಕೇವಲ ಒಬ್ಬ ಮಹಿಳೆ ಹೀಗೆ ಒಂದೇ ಬಾರಿ 6 ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಅಮೆರಿಕಾದ 'ದ ವುಮನ್ಸ್ ಹಾಸ್ಪಟಲ್ ಆಫ್ ಟೆಕ್ಸಾಸ್' ನಲ್ಲಿ ಥೆಲ್ಮಾ ಚೈಕಾರ ಎಂಬ ಮಹಿಳೆ 6 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಲ್ಲಿನ ವೈದ್ಯರು  ಅಪರೂಪದ ಘಟನೆಯ ಕುರಿತಾಗಿ ಮಾಹಿತಿ ನೀಡುತ್ತಾ 'ಮಾರ್ಚ್ 15 ರಂದು ಬೆಳಗ್ಗೆ 4.50 ರಿಂದ 4.59ರ ನಡುವೆ 4 ಗಂಟು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಥೆಲ್ಮಾ ಆರೋಗ್ಯಯುತವಾಗಿದ್ದಾರೆ' ಎಂದಿದ್ದಾರೆ.

ಆಸ್ಪತ್ರೆ ಮೂಲಗಳಿಂದ ಲಭ್ಯವಾದ ಮಾಹಿತಿ ಅನ್ವಯ ಪ್ರತಿಯೊಂದು ಮಗು 800 ರಿಂದ 850 ಗ್ರಾಂ ತೂಕ ಹೊಂದಿದೆ ಎಂದು ತಿಳಿದು ಬಂದಿದೆ. ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯ ನವಜಾತ ಮಕ್ಕಳ ವಿಭಾಗದಲ್ಲಿಡಲಾಗಿದೆ.

ಥೆಲ್ಮಾ ತನ್ನ ಹೆಣ್ಮಕ್ಕಳ ಹೆಸರನ್ನು ಜೀನಾ ಹಾಗೂ ಜುರಿಯಲ್ ಎಂದಿಟ್ಟಿದ್ದಾಋಎ. ಆದರೆ ಗಂಡು ಮ್ಕಕಳ ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ.