ಗ್ವಾಡಾರ್(ಮೇ.11): ಪಾಕಿಸ್ತಾನದ ಗ್ವಾಡಾರ್ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಉಗ್ರ ದಾಳಿ ನಡೆದಿದ್ದು, ಶಸ್ತ್ರ ಸಜ್ಜಿತ ಉಗ್ರರು ಹೋಟೆಲ್‌ನ್ನು ಸುಪರ್ದಿಗೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಲ್ಲಿನ ಪಿಲ್ ಕಾಂಟಿನೆಂಟಲ್ ಹೋಟೆಲ್‌ಗೆ ನುಗ್ಗಿದ ಉಗ್ರರು, ಗುಂಡಿನ ದಾಳಿ ನಡೆಸಿ ಹೋಟೆಲ್‌ನ್ನು ವಶಕ್ಕೆ ಪಡೆದಿದ್ದಾರೆ ಎಂದು ಗ್ವಾಡಾರ್ ಠಾಣಾಧಿಕಾರಿ ಅಸ್ಲಂ ಬಾಂಗುಲ್ ಜಾಯ್ ಮಾಹಿತಿ ನೀಡಿದ್ದಾರೆ.

ಇದುವರೆಗೂ ಯಾವುದೇ ಸಾವು ನೋವು ಸಂಭವಿಸಿದ ಮಾಹಿತಿ ಬಂದಿಲ್ಲವಾದರೂ, ಪೊಲೀಸರು ಹೋಟೆಲ್‌ನ್ನು ಸುತ್ತುವರೆದಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ. ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ತಾನೇ ಈ ದಾಳಿ ನಡಿಸಿರುವುದಾಗಿ ಸ್ಪಷ್ಟಪಡಿಸಿದೆ.