Asianet Suvarna News Asianet Suvarna News

ಅಮೆರಿಕ ಸೇನಾ ಕೇಂದ್ರದ ಮೇಲೆ ದಾಳಿ

ಕಾರ್ಮಿಕನ ವೇಷ ಧರಿಸಿ ಬಂದಿರುವ ಅತ್ಮಾಹುತಿ ದಾಳಿಕೋರ ದಾಳಿ ನಡೆಸಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Terrorist attack at usa army camp

ಕಾಬೂಲ್(ನ.13): ಆಫ್ಘಾನಿಸ್ತಾನದಲ್ಲಿರುವ ಅಮೆರಿಕ ರಾಷ್ಟ್ರ ಅತ್ಯಂತ ದೊಡ್ಡ ಸೇನಾ ನೆಲೆಯ ಮೇಲೆ ಆತ್ಮಾಹುತಿ ದಾಳಿಯನ್ನು ನಡೆಸಲಾಗಿದ್ದು, ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.  ಕಾರ್ಮಿಕನ ವೇಷ ಧರಿಸಿ ಬಂದಿರುವ ಅತ್ಮಾಹುತಿ ದಾಳಿಕೋರ ದಾಳಿ ನಡೆಸಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆತ್ಮಾಹುತಿ ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರ ಸಂಘಟನೆ ಹೊತ್ತುಕೊಂಡಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಅಮೆರಿಕ ರಾಷ್ಟ್ರದ ಇಬ್ಬರು ಯೋಧರು, ಇಬ್ಬರು ಗುತ್ತಿಗೆದಾರರು ಸೇರಿದಂತೆ 16 ಮಂದಿ ಗಾಯಗೊಂಡಿದ್ದಾರೆ. ಅಫ್ಘಾನಿದಲ್ಲಿರುವ ಅಮೆರಿಕ ಕೇಂದ್ರಗಳಿಗೆ ಹೆಚ್ಚಿನ ಭದ್ರತೆಯನ್ನು ನೀಡಲಾಗಿರುತ್ತದೆ. ಭದ್ರತೆಯ ನಡುವೆಯೂ ದಾಳಿಯನ್ನು ನಡೆಸಲಾಗಿದೆ.

Follow Us:
Download App:
  • android
  • ios