ಮಲ್ಲೇಶ್ವರ ಸ್ಫೋಟದಲ್ಲಿ ಗಾಯ ಗೊಂಡಿದ್ದ ಕುಮಾರಿ ಲಿಷಾ ಅವರಿಗೆ ಸಿ ದರ್ಜೆಯಗೆ (ಸಬ್‌ ರಿಜಿಸ್ಟ್ರಾರ್‌) ಸರ್ಕಾರಿ ಉದ್ಯೋಗ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
2013ರ ಏಪ್ರಿಲ್ನಲ್ಲಿ ನಡೆದ ಸ್ಫೋಟ ದಲ್ಲಿ ಲಿಷಾ ಗಾಯಗೊಂಡಿದ್ದರು. ಆಗ ಲಿಷಾ ಅವರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು.
ಅಪಘಾತದಲ್ಲಿ ಅಸುನೀಗಿದ್ದ ಎಸ್ಪಿ ರವಿಕುಮಾರ್ ಪುತ್ರಿ ಅನಿತಾ ಅವರಿಗೆ ಅನುಕಂಪದ ಆಧಾರದಲ್ಲಿ ಸಬ್ ರಿಜಿಸ್ಟ್ರಾರ್ ಹುದ್ದೆಯನ್ನೇ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಜಯಚಂದ್ರ ಹೇಳಿದರು.
