Asianet Suvarna News Asianet Suvarna News

10 ದಿನಗಳ ಕಾಲ ನಾಗ ಪೊಲೀಸ್ ವಶಕ್ಕೆ : ಕೋರ್ಟ್ನಲ್ಲೂ ರೌಡಿ ನಾಗನ ಹೈಡ್ರಾಮಾ

ನಾಗನನ್ನು ಕೋರ್ಟ್​ಗೆ ಹಾಜರು ಪಡಿಸುತ್ತಲೇ ನಾಗ ನ್ಯಾಯಾಧೀಶರ ಎದುರು ವಿನಮ್ರವಾಗಿ ನಿಂತಿದ್ದ. ಅರ್ಧ ಗಂಟೆ ಕಾಲ ಕೈ ಮುಗಿದೇ ನಿಲ್ಲೋ ಮೂಲ್ಕ ಅಲ್ಲೂ ಹೈಡ್ರಾಮ ನಡೆಸಿದ. ಹೆಣ್ಣೂರು ಪೊಲೀಸರು 14 ದಿನಗಳ ಕಾಲ ನಾಗನ್ನು ವಶಕ್ಕೆ ನೀಡುವಂತೆ ಕೇಳಿಕೊಂಡರು. ಕೋರ್ಟ್​ ಹತ್ತು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ  ಆದೇಶಿಸಿತು. ಇನ್ನೂ ನಾಗನ ಕೇಸ್​ನಿಂದ ವಕೀಲ ಶ್ರೀರಾಮರೆಡ್ಡಿ  ಹಿಂದೆ ಸರಿದ ಕಾರಣ ವಕೀಲ ನರೇಶ್ ನಾಗನ ಪರ ವಾದ ಮಂಡಿಸಿದ್ರು. ಪೊಲೀಸರು ನಾಗನ ಮೇಲೆ ದೈಹಿಕ ಹಲ್ಲೆಗೆ ಮುಂದಾಗದಂತೆ ಮನವಿ ಮಾಡಿದ್ರು.

Ten Days police custody to naga
  • Facebook
  • Twitter
  • Whatsapp

ಬೆಂಗಳೂರು(ಮೇ.13): ಪೊಲೀಸರಿಗೆ ಚಳ್ಳೆ ತಿನ್ನಿಸುತ್ತಿದ್ದ ನಾಗ ಸಿಕ್ಕಿಬಿದ್ದಿದ್ದಾನೆ. ಪೊಲೀಸರ ಕೈಗೆ ಸಿಕ್ಕಿಬಿದ್ದ ನಾಗ ಅಂಡ್​ ಸನ್ಸ್ ನ್ಯಾಯಾಧೀಶರ ಎದುರು ಹಾಜರಾದರು. ದೇವಸ್ಥಾನದಲ್ಲಿ ಕೈಕಟ್ಟಿ ನಿಲ್ಲೋ ಥರ ಡ್ರಾಮಾ ಆಡಿದ ನಾಗನನ್ನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಕೊರ್ಟ್​ನ ಆವರಣದಲ್ಲೂ ನಾಗನ ಹೈಡ್ರಾಮಾ ಮುಂದುವರೆದಿತ್ತು.

ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಶ್ರೀರಾಮಪುರದ ನಾಗ ನಿನ್ನೆ ತಮಿಳುನಾಡಿನ ಆರ್ಕಾಟ್​ನಲ್ಲಿ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಇಂದು ನಾಗ ಮತ್ತು ನಾಗನ ಇಬ್ಬರು ಮಕ್ಕಳನ್ನೂ ಬೆಂಗಳೂರಿನ ಅಂಬೇಡ್ಕರ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದ ಪೊಲೀಸರು ನಂತರ 11 ನೇ ಎಸಿಎಂಎಂ ಕೋರ್ಟ್​ಗೆ ಹಾಜರುಪಡಿಸಿದರು.

ಕೋರ್ಟ್'ನಲ್ಲೂ ಹೈಡ್ರಾಮಾ

ನಾಗನನ್ನು ಕೋರ್ಟ್​ಗೆ ಹಾಜರು ಪಡಿಸುತ್ತಲೇ ನಾಗ ನ್ಯಾಯಾಧೀಶರ ಎದುರು ವಿನಮ್ರವಾಗಿ ನಿಂತಿದ್ದ. ಅರ್ಧ ಗಂಟೆ ಕಾಲ ಕೈ ಮುಗಿದೇ ನಿಲ್ಲೋ ಮೂಲ್ಕ ಅಲ್ಲೂ ಹೈಡ್ರಾಮ ನಡೆಸಿದ. ಹೆಣ್ಣೂರು ಪೊಲೀಸರು 14 ದಿನಗಳ ಕಾಲ ನಾಗನ್ನು ವಶಕ್ಕೆ ನೀಡುವಂತೆ ಕೇಳಿಕೊಂಡರು. ಕೋರ್ಟ್​ ಹತ್ತು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ  ಆದೇಶಿಸಿತು. ಇನ್ನೂ ನಾಗನ ಕೇಸ್​ನಿಂದ ವಕೀಲ ಶ್ರೀರಾಮರೆಡ್ಡಿ  ಹಿಂದೆ ಸರಿದ ಕಾರಣ ವಕೀಲ ನರೇಶ್ ನಾಗನ ಪರ ವಾದ ಮಂಡಿಸಿದ್ರು. ಪೊಲೀಸರು ನಾಗನ ಮೇಲೆ ದೈಹಿಕ ಹಲ್ಲೆಗೆ ಮುಂದಾಗದಂತೆ ಮನವಿ ಮಾಡಿದ್ರು.

ಕೋರ್ಟ್​ ಆವರಣದ ಹೊರಗೂ ನಾಗನ ಹೈಡ್ರಾಮ ನಡೀತು. ಹಣೆಗೆ ಕೈಯಿಟ್ಟುಕೊಂಡು ನನ್ನ ಹಣೆಬರಹ ಅಂತಾ ಇಪ್ಪತ್ತಕ್ಕು ಹೆಚ್ಚು ಬಾರಿ ಗೊಣಗುತ್ತಾ ಪೊಲೀಸ್ ಜೀಪ್ ಹತ್ತಿದ. ನಾಗ ಮತ್ತು ಇಬ್ಬರು ಮಕ್ಕಳ ಜೊತೆಗೆ ಕಿಡ್ನ್ಯಾಪ್​ ಪ್ರಕರಣದಲ್ಲಿ ಭಾಗಿಯಾದ, ಶರವಣ ಮತ್ತು ಜೈ ಕೃಷ್ಣರನ್ನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇನ್ನೂ ನಾಗನ ಬಂಧಿಸುವಲ್ಲಿ ಯಶಸ್ವಿಯಾದ ಎಸಿಪಿ ರವಿಕುಮಾರ್ ನೇತೃತ್ವದ ತನಿಖಾ ತಂಡಕ್ಕೆ ಪೊಲೀಸ್ ಆಯುಕ್ತರು ಎರಡು ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ.

Follow Us:
Download App:
  • android
  • ios