ಭಾರತ ಬಡ ರಾಷ್ಟ್ರ ಅಂತ ಅಂದುಕೊಳ್ಳೋರಿಗೆ, ಇವತ್ತಿನ ಸ್ಟೋರಿ ನೋಡಿದ್ರೆ ಅಸಲಿ ವಿಷಯ ಗೊತ್ತಾಗುತ್ತೆ. ಯಾಕಂದ್ರೆ, ಭಾರತದ ದೇವರಲ್ಲಿ ಇರೋ ಅಷ್ಟು ದುಡ್ಡು ಬೇರೆ ಯಾವ ದೇಶದ ದೇವಸ್ಥಾನದಲ್ಲಿಯೂ ಇಲ್ಲ. ಇದು ದೇವರ ಕಥೆ ಆಗಿದ್ದರೆ. ಇನ್ನೂ ಕೆಲವರಂತೂ ದುಡ್ಡು ಬಿಸಾಕಿ ಹುಚ್ಚರಂತೆ ಮೋಜು-ಮಸ್ತಿ ಮಾಡುತ್ತಾರೆ. ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ ನೋಡಿ.
ನವದೆಹಲಿ(ಆ.10): ಭಾರತ ಬಡ ರಾಷ್ಟ್ರ ಅಂತ ಅಂದುಕೊಳ್ಳೋರಿಗೆ, ಇವತ್ತಿನ ಸ್ಟೋರಿ ನೋಡಿದ್ರೆ ಅಸಲಿ ವಿಷಯ ಗೊತ್ತಾಗುತ್ತೆ. ಯಾಕಂದ್ರೆ, ಭಾರತದ ದೇವರಲ್ಲಿ ಇರೋ ಅಷ್ಟು ದುಡ್ಡು ಬೇರೆ ಯಾವ ದೇಶದ ದೇವಸ್ಥಾನದಲ್ಲಿಯೂ ಇಲ್ಲ. ಇದು ದೇವರ ಕಥೆ ಆಗಿದ್ದರೆ. ಇನ್ನೂ ಕೆಲವರಂತೂ ದುಡ್ಡು ಬಿಸಾಕಿ ಹುಚ್ಚರಂತೆ ಮೋಜು-ಮಸ್ತಿ ಮಾಡುತ್ತಾರೆ. ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ ನೋಡಿ.
ದುಡ್ಡಿನ ಅಧಿದೇವತೆಯನ್ನು ದುಡ್ಡಿನಿಂದ್ಲೇ ಸಿಂಗಾರ. ಬಣ್ಣ ಬಣ್ಣದ ಕಲರ್ ಪೇಪರ್'ಗಳಿಂದ ಗೋಡೆಯನ್ನು ಸಿಂಗಾರ ಮಾಡೋ ಹಾಗೆ ಕೋಟಿ ಕೋಟಿ ರೂಪಾಯಿಗಳಲ್ಲಿ ದೇವಸ್ಥಾನ ಅಲಂಕಾರ ದೇವಸ್ಥಾನದಲ್ಲಿ ಎಲ್ಲೆ ಕಣ್ಣು ಹಾಯಿಸಿದರೂ ಬರೀ ದುಡ್ಡು ದುಡ್ಡು ದುಡ್ಡು. ಲಕ್ಷ್ಮೀದೇವಿ ಅಂದ್ರೆ ದುಡ್ಡಿನ ಅಧಿದೇವತೆ. ಕೆಲಭಕ್ತರು ಲಕ್ಷ್ಮೀ ದೇವಿ ದೇವಸ್ಥಾನವನ್ನೇ ದುಡ್ಡಿನಿಂದ ಅಲಂಕಾರ ಮಾಡಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.
ಗಣೇಶ ಚೌತಿಯ ಸಮಯದಲ್ಲೂ ದುಡ್ಡಿನಿಂದ ಗಣೇಶನನ್ನು ಅಲಂಕಾರ ಮಾಡಿ ಗಣೇಶನ ಕೃಪೆಗೆ ಪಾತ್ರರಾಗುತ್ತಾರೆ. ದೇವರ ಸಿಂಗಾರ ಅಷ್ಟೇ ಅಲ್ಲದೆ ನಂಗನಾಚ್, ಕವಾಲಿ, ಬಾರ್ ಡ್ಯಾನ್ಸ್, ಮದುವೆ ಸಮಾರಂಭ ಹೀಗೆ ನಾನಾ ಕಡೆ ಕೋಟಿ ಕೋಟಿ ಹಣ ಎರಚುವುದು ಕಾಮನ್ ಆಗ್ಬಿಟ್ಟಿದೆ.
ಕೆಲವರಂತೂ ಹಣಕ್ಕೆ ಬೆಲೆಯೇ ಇಲ್ಲವೆಂಬಂತೆ ಹಣವನ್ನು ಕಂಡರೆ ಹುಚ್ಚರಂತೆ ನೋಟಿನ ಮೇಲೆ ಮಲಗಿಕೊಂಡು ಡ್ಯಾನ್ಸ್ ಬಾಬಾ ಡ್ಯಾನ್ಸ್ ಅಂತ ಕುಣಿದು ಕುಪ್ಪಳಿಸ್ತಾರೆ. ಇನ್ನು ಮಾರುಕಟ್ಟೆಯಲ್ಲಿ ನೋಟಿನ ಕಂತೆ-ಕಂತೆ ಹೂವಿನ ಹಾರದಂತೆ ನೋಟಿನ ಹಾರಗಳ ಮಾರಾಟ ಜೋರಾಗಿ ನಡೆಯುತ್ತೆ. ಮದುವೆ ಸಮಾರಂಭದಲ್ಲಿ ಲಕ್ಷಾಂತರ ರೂಪಾಯಿ ಹೂವಿನ ಹಾರ ಹಾಕಿಕೊಂಡು ದರ್ಪ ಮೆರೆಯುತ್ತಾರೆ.
ಒಟ್ಟಿನಲ್ಲಿ ದೇಶದಲ್ಲಿ ಲಕ್ಷಾಂತರ ಜನರು ಬೆವರು ಸುರಿಸಿದ್ರು ಸಾವಿರ ರೂಪಾಯಿ ಸಂಪಾದನೆ ಮಾಡಲು ಆಗಲ್ಲ. ಆದ್ರೆ ಕೆಲವರು ದುಡ್ಡಿಗೆ ಬೆಲೆಯೇ ಇಲ್ಲವೆಂಬಂತೆ ನೋಟಿನೊಂದಿಗೆ ಮೋಜು-ಮಸ್ತಿ ಮಾಡುತ್ತಾರೆ. ಹೀಗೆ ದುಡ್ಡಿನೊಂದಿಗೆ ಮೋಜು-ಮಸ್ತಿ ಮಾಡುವರಿಗೆ ಕಡಿವಾಣ ಹಾಕುವರು ಯಾರು? ಐಟಿ ಅಧಿಕಾರಿಗಳಾ..? ಆರ್ಬಿಐ ನೀತಿಗಳಾ..?
