ಹಿಜಡಾಗಳಿಂದ ಆಂಧ್ರ ಪ್ರದೇಶ ಸಿಎಂ ನಾಯ್ಡುಗೆ ದೇವಾಲಯ

Temple For CM Naidu
Highlights

ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಗೌರವಾರ್ಥ 30 ಲಕ್ಷ ರು. ಅಂದಾಜಿನಲ್ಲಿ ದೇವಸ್ಥಾನ ಕಟ್ಟಲು ಹಿಜಡಾ ಸಮುದಾಯದ ಜನರು ನಿರ್ಧರಿಸಿದ್ದಾರೆ. ನಂದ್ಯಾಲ್ ನಗರದ ಪೆದ್ದಕೊತ್ತಲ ಗ್ರಾಮದಲ್ಲಿ ‘ಸಮತಾ ಹಿಜಡಾ ಹಕ್ಕುಲ ಐಕ್ಯ ಪೋರಾಟ ವೇದಿಕಾ’ ಈ ದೇವಸ್ಥಾನ ನಿರ್ಮಿಸಲು ನಿರ್ಧರಿಸಿದೆ.

ಕರ್ನೂಲ್ : ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಗೌರವಾರ್ಥ 30 ಲಕ್ಷ ರು. ಅಂದಾಜಿನಲ್ಲಿ ದೇವಸ್ಥಾನ ಕಟ್ಟಲು ಹಿಜಡಾ ಸಮುದಾಯದ ಜನರು ನಿರ್ಧರಿಸಿದ್ದಾರೆ. ನಂದ್ಯಾಲ್ ನಗರದ ಪೆದ್ದಕೊತ್ತಲ ಗ್ರಾಮದಲ್ಲಿ ‘ಸಮತಾ ಹಿಜಡಾ ಹಕ್ಕುಲ ಐಕ್ಯ ಪೋರಾಟ ವೇದಿಕಾ’ ಈ ದೇವಸ್ಥಾನ ನಿರ್ಮಿಸಲು ನಿರ್ಧರಿಸಿದೆ. ಸಂಕ್ರಾಂತಿ ಬಳಿಕ ದೇವಸ್ಥಾನ ನಿರ್ಮಾಣ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷ ವಿಜಯ್ ಕುಮಾರ್ ಹೇಳಿದ್ದಾರೆ.

ದೇವಸ್ಥಾನದಲ್ಲಿ ನಾಯ್ಡು ಅವರ ಬೆಳ್ಳಿ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

loader