ನಟಿಯರನ್ನು ಬಳಸಿ ವೇಶ್ಯಾವಾಟಿಕೆ

Telugu film producer, wife arrested in US for running sex racket
Highlights

ಅಮೆರಿಕದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ತೆಲುಗು ಚಿತ್ರ ನಿರ್ಮಾಪಕ ಹಾಗೂ ಆತನ ಪತ್ನಿಯನ್ನು ಶಿಕಾಗೋ ಪೊಲೀಸರು ಬಂಧಿಸಿದ್ದಾರೆ. 
 

ಹೈದರಾಬಾದ್‌ : ಅಮೆರಿಕದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ತೆಲುಗು ಚಿತ್ರ ನಿರ್ಮಾಪಕ ಹಾಗೂ ಆತನ ಪತ್ನಿಯನ್ನು ಶಿಕಾಗೋ ಪೊಲೀಸರು ಬಂಧಿಸಿದ್ದಾರೆ. 

ಉದ್ಯಮಿ ಹಾಗೂ ನಿರ್ಮಾಪಕ ಮೊದುಗುಮುಡಿ ಕಿಶನ್‌ (34) ಹಾಗೂ ಆತನ ಪತ್ನಿ ಚಂದ್ರಾ (31) ಬಂಧಿತರು. ತೆಲುಗು ಚಿತ್ರನಟಿಯರನ್ನು ಪುಸಲಾಯಿಸಿ, ತಾತ್ಕಾಲಿಕ ವೀಸಾದ ಮೇಲೆ ಅಮೆರಿಕಕ್ಕೆ ಕರೆಸಿ ಕೊಳ್ಳುತ್ತಿದ್ದ ಈ ದಂಪತಿ, ಅವರನ್ನು ಬಳಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ನಟಿಯರ ಬಗ್ಗೆ ಭಾರತೀಯ ಸಮ್ಮೇಳನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಚಾರ ಮಾಡುತ್ತಿದ್ದರು. ಗಿರಾಕಿಗಳಿಗೆ 2 ಲಕ್ಷ ರು. ವಿಧಿಸುತ್ತಿದ್ದರು. 

ನಟಿಯರು, ಅವರು ಭೇಟಿಯಾದ ಗಿರಾಕಿಗಳು ಹಾಗೂ ಸಂಗ್ರಹಿಸಲಾದ ಶುಲ್ಕದ ಬಗ್ಗೆ ನಿರ್ಮಾಪಕನ ಪತ್ನಿ ಲೆಡ್ಜರ್‌ ಕೂಡ ನಿರ್ವಹಣೆ ಮಾಡುತ್ತಿದ್ದಳು.

loader