ಹೈದ್ರಾಬಾದ್ : ತೆಲಂಗಾಣದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಇದೀಗ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಮುಖ್ಯಮಂತ್ರಿ ಚಂದ್ರಶೇಖರ್ ರಾವ್  ಡಿಎಂಕೆ ಮುಖಂಡ ಸ್ಟಾಲಿನ್ ಭೇಟಿ ಮಾಡಲಿದ್ದಾರೆ. 

ಈ ಭೇಟಿಯ ಹಿಂದಿನ ಉದ್ದೇಶ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಹೊರತುಪಡಿಸಿದ ಒಕ್ಕೂಟ ರಚನೆ ಮಾಡುವುದಾಗಿದೆ. ಲೋಕಸಭಾ ಚುನಾವನೆ ಬಳಿಕ ಈ ಒಕ್ಕೂಟವು ಘೋಷಣೆಯಾಗಲಿದೆ. 

ಇನ್ನು ಸ್ಟಾಲಿನ್ ಕೂಡ ಕೆಸಿ. ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ತಮಿಳುನಾಡಿನಲ್ಲಿ  ನಾಲ್ಕು ಕ್ಷೇತ್ರಗಳಿಗೆ ಇದೇ ಮೇ 19 ರಂದು ಚುನಾವಣೆ ನಡೆಯಲಿದೆ. 

ಇನ್ನು ಇದೇ ವೇಳೆ ಕರ್ನಾಟಕ ಸಿಎಂ  ಸಿಎಂ ಎಚ್.ಡಿ ಕುಮಾರಸ್ವಾಮಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜಗನ್ ಮೋಹನ್ ರೆಡ್ಡಿ ಸೇರಿದಂತೆ ಅನೇಕರನ್ನು ಭೇಟಿ ಮಾಡಲು ತೀರ್ಮಾನಿಸಿದ್ದಾರೆ. 

ಆದರೆ ಕಾಂಗ್ರೆಸ್ ಈಗಾಗಲೇ ಚುನಾವಣೆಯ ನಂತರದ ಮೈತ್ರಿಗಾಗಿ ಟಿಆರ್ ಎಸ್ ಹಾಗು ವೈ ಎಸ್ ಆರ್ ಕಾಂಗ್ರೆಸ್  ಜೊತೆಗೆ  ಮಾತುಕತೆ ನಡೆಸಲು ಯತ್ನಿಸುತ್ತಿದೆ.