ಭ್ರಷ್ಟಾಚಾರ  ಆರೋಪದ ಬಗ್ಗೆ ವಿವರಣೆ ನೀಡಬೇಕು. ಇಲ್ಲವೇ  ರಾಜೀನಾಮೆ ಸಲ್ಲಿಸುವಂತೆ ಜೆಡಿಯು ಪಕ್ಷವು  ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ನೀಡಿದ್ದ ಗಡುವು ನಿನ್ನೆಗೆ ಮುಗಿದಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಇವತ್ತು ಜೆಡಿಯು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.

ಬಿಹಾರ(ಜು.16): ಭ್ರಷ್ಟಾಚಾರ ಆರೋಪದ ಬಗ್ಗೆ ವಿವರಣೆ ನೀಡಬೇಕು. ಇಲ್ಲವೇ ರಾಜೀನಾಮೆ ಸಲ್ಲಿಸುವಂತೆ ಜೆಡಿಯು ಪಕ್ಷವು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ನೀಡಿದ್ದ ಗಡುವು ನಿನ್ನೆಗೆ ಮುಗಿದಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಇವತ್ತು ಜೆಡಿಯು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.

ಭ್ರಷ್ಟಾಚಾರ ಆಪಾದನೆ ಹೊತ್ತವರು ಸಚಿವರಾಗಿ ಮುಂದುವರಿಯಬಾರದು ಎಂಬ ತಮ್ಮ ನಿಲುವಿಗೆ ನಿತೀಶ್ ಕುಮಾರ್​ ಅಂಟಿಕೊಂಡಿದ್ದಾರೆ. ನಮ್ಮ ನಾಯಕ ನಿತೀಶ್ ಕುಮಾರ್ ಅವರು ಭ್ರಷ್ಟಾಚಾರದ ಜತೆ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುವುದು ಗೋಡೆ ಬರಹದಷ್ಟೇ ಸ್ಪಷ್ಟ . ಇದನ್ನು ಲಾಲು ಪ್ರಸಾದ್‌ ನೆನಪಿಟ್ಟುಕೊಳ್ಳಬೇಕು’ ಅಂತ ಈ ಮಧ್ಯೆ ಜೆಡಿಯು ಮುಖ್ಯ ವಕ್ತಾರ ಸಂಜಯ್ ಸಿಂಗ್ ಹೇಳಿದ್ದಾರೆ.