ಎರಡು ದಿನಗಳ ಹಿಂದೆ ಸುವರ್ಣನ್ಯೂಸ್'ನಲ್ಲಿ ನಡೆದ "ಯಾರು ಕೊಡಿಸಿದ್ದು ಸ್ವಾತಂತ್ರ್ಯ?" ಚರ್ಚೆಯ ವಿಚಾರದ ಕುರಿತು ಸುವರ್ಣನ್ಯೂಸ್ ವೆಬ್'ಸೈಟ್'ನಲ್ಲಿ ಪ್ರಕಟವಾದ ವರದಿಯ ತಲೆಬರಹಕ್ಕೆ ತೇಜಸ್ವಿ ಸೂರ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚರ್ಚೆಯಲ್ಲಿ ತಾವು ಹೇಳಿದ್ದು ಬೇರೆ, ಆದರೆ ಶೀರ್ಷಿಕೆಯಲ್ಲಿ ತಪ್ಪು ಸಂದೇಶ ಕೊಡುವ ರೀತಿಯಲ್ಲಿ ಅಸಮರ್ಪಕ ಶೀರ್ಷಿಕೆ ನೀಡಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಆರೆಸ್ಸೆಸ್ ಪಾತ್ರವೇನು ಎಂಬ ವಿಚಾರದ ಕುರಿತು ನಡೆದ ಆ ಚರ್ಚಾ ಕಾರ್ಯಕ್ರಮದಲ್ಲಿ ತೇಜಸ್ವಿ ಸೂರ್ಯ, ರಾಧಾಕೃಷ್ಣ ಹೊಳ್ಳ, ಜಿಎನ್ ನಾಗರಾಜ್, ಶಫೀವುಲ್ಲಾ ಹಾಗೂ ವಿಎಸ್ ಉಗ್ರಪ್ಪ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಹಿನ್ನೆಲೆಯಲ್ಲಿ ಸಾವರ್ಕರ್, ಅಂಬೇಡ್ಕರ್ ಮೊದಲಾದವರ ಬಗ್ಗೆ ವಿಚಾರ ವಿನಿಮಯವಾದವು.
ಬೆಂಗಳೂರು: ಎರಡು ದಿನಗಳ ಹಿಂದೆ ಸುವರ್ಣನ್ಯೂಸ್'ನಲ್ಲಿ ನಡೆದ "ಯಾರು ಕೊಡಿಸಿದ್ದು ಸ್ವಾತಂತ್ರ್ಯ?" ಚರ್ಚೆಯ ವಿಚಾರದ ಕುರಿತು ಸುವರ್ಣನ್ಯೂಸ್ ವೆಬ್'ಸೈಟ್'ನಲ್ಲಿ ಪ್ರಕಟವಾದ ವರದಿಯ ತಲೆಬರಹಕ್ಕೆ ತೇಜಸ್ವಿ ಸೂರ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚರ್ಚೆಯಲ್ಲಿ ತಾವು ಹೇಳಿದ್ದು ಬೇರೆ, ಆದರೆ ಶೀರ್ಷಿಕೆಯಲ್ಲಿ ತಪ್ಪು ಸಂದೇಶ ಕೊಡುವ ರೀತಿಯಲ್ಲಿ ಅಸಮರ್ಪಕ ಶೀರ್ಷಿಕೆ ನೀಡಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಆರೆಸ್ಸೆಸ್ ಪಾತ್ರವೇನು ಎಂಬ ವಿಚಾರದ ಕುರಿತು ನಡೆದ ಆ ಚರ್ಚಾ ಕಾರ್ಯಕ್ರಮದಲ್ಲಿ ತೇಜಸ್ವಿ ಸೂರ್ಯ, ರಾಧಾಕೃಷ್ಣ ಹೊಳ್ಳ, ಜಿಎನ್ ನಾಗರಾಜ್, ಶಫೀವುಲ್ಲಾ ಹಾಗೂ ವಿಎಸ್ ಉಗ್ರಪ್ಪ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಹಿನ್ನೆಲೆಯಲ್ಲಿ ಸಾವರ್ಕರ್, ಅಂಬೇಡ್ಕರ್ ಮೊದಲಾದವರ ಬಗ್ಗೆ ವಿಚಾರ ವಿನಿಮಯವಾದವು.
ತೇಜಸ್ವಿ ಸೂರ್ಯ ನೀಡಿರುವ
"ಕ್ವಿಟ್ ಇಂಡಿಯಾ ಚಳುವಳಿಯ 75 ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಚಳುವಳಿಗೆ ಆರ್ ಎಸ್ ಎಸ್ ಕೊಡುಗೆ ಬಗ್ಗೆ ಸುವರ್ಣ ನ್ಯೂಸ್ ನಲ್ಲಿ ನಡೆದಿದ್ದ ಚರ್ಚೆಯಲ್ಲಿ ನಾನು ಕೇಳಿದ್ದ ಪ್ರಶ್ನೆಯ ಕುರಿತು ಸುವರ್ಣ ನ್ಯೂಸ್ ವೆಬ್'ಸೈಟ್'ನಲ್ಲಿ ಪ್ರಕಟವಾದ ವರದಿಯ ಶೀರ್ಷಿಕೆ ತಪ್ಪು ಸಂದೇಶ ನೀಡುವಂತಿದೆ.
'ಸಾವರ್ಕರರು ದೇಶದ್ರೋಹಿಯಾದರೆ ಅಂಬೇಡ್ಕರರೂ ಯಾಕಲ್ಲ: ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಪ್ರಶ್ನೆ' ಎಂಬ ತಲೆಬರಹದ ಬಗ್ಗೆ ಹಲವರು ನನ್ನ ಸ್ಪಷ್ಟಿಕರಣ ಕೇಳುತ್ತಿದ್ದಾರೆ.
ಆರ್ ಎಸ್ಎಸ್ ನ ಕೊಡುಗೆ ಬಗ್ಗೆ ನಡೆದ ಚರ್ಚೆಯಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಬಗ್ಗೆ ವೀರ ಸಾವರ್ಕರ್, ಅಂಬೇಡ್ಕರ್ ಸೇರಿದಂತೆ ಅಂದಿನ ಮುಂಚೂಣಿ ಸ್ವಾತಂತ್ರ್ಯ ಹೋರಾಟಗಾರರು, ಗಣ್ಯರ ನಿಲುವು, ಪ್ರತಿಕ್ರಿಯೆ ಏನಿತ್ತು ಎಂಬುದರ ಬಗ್ಗೆ ಮಾತನಾಡಿದ್ದೆ. "ವೀರ ಸಾವರ್ಕರ್, ಹಿಂದೂ ಯುವಕರು ಬ್ರಿಟೀಷ್ ಸೇನೆ ಸೇರಬೇಕು ಅಂತ ಹೇಳಿದ್ದರು ಅದನ್ನೇ ಪರಿಗಣಿಸಿ ವೀರ ಸಾವರ್ಕರ್ ಕ್ವಿಟ್ ಇಂಡಿಯಾ ಚಳುವಳಿಯನ್ನು ವಿರೋಧಿಸಿದ್ದರು, ಬ್ರಿಟೀಷರ ಪರವಾಗಿದ್ದರು ಎನ್ನುತ್ತೀರಿ. ಸಾವರ್ಕರ್ ಹೇಗೆ ಹಿಂದೂ ಯುವಕರು ಬ್ರಿಟೀಷ್ ಸೇನೆ ಸೇರಬೇಕು ಎಂದು ಹೇಳಿದ್ದರೋ ಹಾಗೆಯೇ ನಮ್ಮ ಮಾಹರ್ ಹುಡುಗ್ರು, ದಲಿತ ಹುಡುಗ್ರು ಬ್ರಿಟಿಷ್ ಸೇನೆ ಸೇರ್ಕೋಬೇಕು ಅಂತ ಅಂಬೇಡ್ಕರರೂ ಹೇಳಿದ್ದರು. ಬ್ರಿಟೀಷ್ ಸೇನೆಗೆ ಸೇರಿ ಬ್ರಿಟೀಷರ ವಿರುದ್ಧ ದಂಗೆ ಏಳಬಹುದು ಎಂಬುದು ಇಬ್ಬರೂ ನಾಯಕರ ಉದ್ದೇಶವಾಗಿತ್ತು. ಬ್ರಿಟೀಶ್ ಸೇನೆಗೆ ಯುವಕರು ಸೇರಬೇಕೆಂಬುದನ್ನು ಪರಿಗಣಿಸಿ ಸಾವರ್ಕರ್ ಬ್ರಿಟೀಷರ ಪರವಾಗಿದ್ದರು, ಕ್ವಿಟ್ ಇಂಡಿಯಾ ಚಳುವಳಿಯನ್ನು ವಿರೋಧಿಸಿದ್ದರೆಂದು ದೂಷಿಸಬಹುದಾದರೆ, ಮಾಹರ್ ಹುಡುಗ್ರು ಬ್ರಿಟೀಷ್ ಸೇನೆಗೆ ಸೇರಬೇಕು ಎಂದಿದ್ದ ಅಂಬೇಡ್ಕರ್ ಸಹ ಕ್ವಿಟ್ ಇಂಡಿಯಾ ಚಳುವಳಿಯನ್ನು ವಿರೋಧಿಸಿದ್ದರು ಎಂದು ದೂಷಿಸಬಹುದಲ್ಲ? ಸಾವರ್ಕರ್ ಅವರನ್ನು ದೂಷಿಸಲು ಕಾರಣವಾಗಿದ್ದ ಅಂಶಗಳು ಅಂಬೇಡ್ಕರ್ ಅವರಿಗೂ ಅನ್ವಯವಾಗುತ್ತದೆಯೇ? ಎಂದು ಪ್ರಶ್ನಿಸಿದ್ದೆ.
ಅಂಬೇಡ್ಕರ್ ಅವರ ಚಿಂತನೆ, ರಾಷ್ಟ್ರೀಯತೆ, ದೇಶ ಭಕ್ತಿ ಕುರಿತು ನಾನು ಹಲವು ಲೇಖನಗಳನ್ನು ಬರೆದಿದ್ದೇನೆ, ಹಲವಾರು ಕಾರ್ಯಕ್ರಮದಲ್ಲಿ ಮಾತನಾಡಿದ್ದೇನೆ. ಅಂಬೇಡ್ಕರ್ ಅವರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ, ಲೇಖನಗಳನ್ನು ಬರೆದಿರುವ ನಾನು ಅವರನ್ನ ಪ್ರೇರಣಾದಾಯಿಯಾಗಿರಿಸಿಕೊಂಡು ಬದುಕಬೇಕೆಂದುಕೊಂಡಿರುವ ಅಂಬೇಡ್ಕರ್ ಅವರ ಅಪ್ಪಟ ಅಭಿಮಾನಿ.
ಈ ವಿಷಯವನ್ನು ವರದಿ ಮಾಡುವಾಗ ಕೊಡಲಾದ ತಲೆಬರಹ ನನ್ನನ್ನು ಘಾಸಿಗೊಳಿಸಿದೆ. ಅದರಲ್ಲಿ ಬಳಸಲಾದ ಶಬ್ದಗಳನ್ನು ನಾನು ಹೇಳಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ."
