ಕೊಯಮತ್ತೂರು[ಜು.03]: ಯುದ್ಧ ವಿಮಾನ ತೇಜಸ್‌ ಹಾರಾಟ ಆರಂಭಿಸಿದ ಕೆಲ ಹೊತ್ತಲ್ಲೇ ಅದರ ಪೆಟ್ರೋಲ್‌ ಟ್ಯಾಂಕ್‌ ಕೆಳಕ್ಕೆ ಕಳಚಿ ಬಿದ್ದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಂಗಳವಾರ ಜರುಗಿದೆ.

ಪೆಟ್ರೋಲ್‌ ಟ್ಯಾಂಕ್‌ ಕೆಳಗೆ ಬಿದ್ದ ಪರಿಣಾಮ ಸುಮಾರು 3 ಅಡಿಗಳಷ್ಟುದೊಡ್ಡ ಗುಂಡಿ ನಿರ್ಮಾಣವಾಗಿದೆ. ಸುಮಾರು 1200 ಲೀಟರ್‌ನಷ್ಟು ಪೆಟ್ರೋಲ್‌ ಇದ್ದ ಟ್ಯಾಂಕ್‌ ನಿರ್ಜನ ಪ್ರದೇಶದಲ್ಲಿ ಬಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ.

ಇಂಧನ ಟ್ಯಾಂಕ್‌ ಕಳಚಿಕೊಂಡ ಬೆನ್ನಲ್ಲೇ ವಿಮಾನವನ್ನು ಸಮೀಪದಲ್ಲೇ ಇದ್ದ ಸುಲೂರು ವಾಯುನೆಲೆಯಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ. ಘಟನೆಯಲ್ಲಿ ವಿಮಾನದಲ್ಲಿದ ಸಿಬ್ಬಂದಿ ಯಾವುದೇ ತೊಂದರೆಯಾಗಿಲ್ಲ.

ಈ ನಡುವೆ ಇಂಧನ ಟ್ಯಾಂಕ್‌ ಉರುಳಿಬಿದ್ದ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.