ನವದೆಹಲಿ[ಅ.20]: ಭಾರತದಲ್ಲಿ ರೈಲುಗಳು ನಿಗದಿತ ಸಮಯಕ್ಕಿಂತ ವಿಳಂಬವಾಗುವುದು ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ರೈಲು ಪ್ರಯಾಣ ವಿಳಂಬವಾದ ಕಾರಣಕ್ಕೆ ತೇಜಸ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಕರಿಗೆ ಪರಿಹಾರ ನೀಡಲಾಗುತ್ತಿದೆ.

ದೆಹಲಿ ಹಾಗೂ ಲಖನೌ ಮಧ್ಯೆ ಸಂಚರಿಸುವ ತೇಜಸ್‌ ಎಕ್ಸ್‌ಪ್ರೆಸ್‌ ರೈಲು ಶನಿವಾರ ಎರಡೂ ಕಡೆಯ ಪ್ರಯಾಣ 2 ಗಂಟೆ ವಿಳಂಬವಾಗಿತ್ತು. ಹೀಗಾಗಿ ಪ್ರಯಾಣಿಕರಿಗೆ ತಲಾ 250 ರು. ಪರಿಹಾರವನ್ನು ಐಆರ್‌ಸಿಟಿಸಿ ನೀಡಲಿದೆ.

ತೇಜಸ್ ಬೆನ್ನಲ್ಲೇ 150 ರೈಲು, 50 ನಿಲ್ದಾಣ ಖಾಸಗೀಕರಣ

ಲಖನೌದಿಂದ ಹೊರಟ ರೈಲಿನಲ್ಲಿ 451 ಹಾಗೂ ದೆಹಲಿಯಿಂದ ಹೊರಟ ರೈಲಿನಲ್ಲಿ 500 ಮಂದಿ ಪ್ರಯಾಣಿಸಿದ್ದರು. ಪ್ರತಿಯೊಬ್ಬ ಪ್ರಯಾಣಿಕರ ಮೊಬೈಲ್‌ಗೆ ಲಿಂಕ್‌ವೊಂದನ್ನು ಕಳುಹಿಸಿದ್ದು, ಅದರ ಮೇಲೆ ಕ್ಲಿಕ್‌ ಮೇಲೆ ಪ್ರಯಾಣಿಕರು ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಐಆರ್‌ಸಿಟಿಸಿ ಲಖನೌ ವ್ಯವಸ್ಥಾಪಕ ಅಶ್ವಿನಿ ಶ್ರೀವಾತ್ಸವ ತಿಳಿಸಿದ್ದಾರೆ.

ಖಾಸಗೀಕರಣಗೊಂಡ ದೇಶದ ಮೊದಲ ರೈಲು ಎನಿಸಿರುವ ತೇಜಸ್‌ ಎಕ್ಸ್‌ಪ್ರೆಸ್‌ ಅ.4ರಿಂದ ಸಂಚಾರ ಆರಂಭಿಸಿದ್ದು, ಐಆರ್‌ಸಿಟಿಸಿ ರೈಲಿನ ನಿರ್ವಹಣೆ ಮಾಡುತ್ತಿದೆ.

ಖಾಸಗಿ ತೇಜಸ್‌ ರೈಲು ವಿಳಂಬವಾದ್ರೆ ಗಂಟೆಗೆ 100 ಪರಿಹಾರ ಸಿಗುತ್ತೆ!