ಪಾಟ್ನಾ(ಜು.06): ತಮ್ಮ ಭಾಷಣದ ವೇಳೆ ಮಹಿಳೆಯರು ಮುಂದಿನ ಸಾಲಿನಲ್ಲಿ ಕುಳಿತ ಪರಿಣಾಮ, ಸಭೆಯನ್ನು ಮೊಟಕುಗೊಳಿಸಿ ಸ್ವಾಮಿ ಜ್ಞಾನವತ್ಸಲ ಹೊರ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ.

ಆದರೆ RJD ಯುವ ನಾಯಕ, ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಮಾತ್ರ ಇದಕ್ಕೆ ತದ್ವಿರುದ್ಧ.

‘ನನ್ನ ಪ್ರತಿ ಸಮಾರಂಭದಲ್ಲೂ ಮಹಿಳೆಯರು ಮುಂದಿನ ಸಾಲಿನಲ್ಲಿ ಕುಳಿತಿರಬೇಕು..’ಇದು RJD ಯುವ ನಾಯಕ ತೇಜ್ ಪ್ರತಾಪ್ ಯಾದವ್ ಹೊರಡಿಸಿರುವ ಫರ್ಮಾನು.

ಹೌದು, RJD ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ತೇಜ್ ಪ್ರತಾಪ್, ಮಹಿಳಾ ಸಬಲೀಕರಣಕ್ಕೆ ಪಕ್ಷ ಒತ್ತು ನೀಡುತ್ತದೆ ಎಂದು ಹೇಳಿದರು.

ಇದೇ ಕಾರಣಕ್ಕೆ ತಂದೆ ಲಾಲೂ  ತಮ್ಮ ಪ್ರತಿ ಸಭೆಯಲ್ಲೂ ಮಹಿಳೆಯರಿಗೆ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಹೇಳುತ್ತಿದ್ದರು. ಅದೇ ರೀತಿ ತಮ್ಮ ಪ್ರತಿ ಸಭೆಯಲ್ಲೂ ಮಹಿಳೆಯರು ಮುಂದಿನ ಸಾಲಿನಲ್ಲಿ ಕುಳಿತಿರಬೇಕು ಎಂಬುದು ತಮ್ಮ ಆಶಯ ಎಂದು ತೇಜ್ ಪ್ರತಾಪ್ ಹೇಳಿದ್ದಾರೆ.