ವಿದ್ಯಾಪೀಠದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆಯವರ ಭಾಷಣಕ್ಕೆ ಅಡ್ಡಿಪಡಿಸಲಾಯಿತು ಎನ್ನುವ ಘಟನೆಗೆ ಸಂಬಂಧಿಸಿದಂತೆ ಟೀಂ ಮೋದಿ ಸ್ಪಷ್ಟನೆ ನೀಡಿದೆ.  

ಬೆಂಗಳೂರು (ಏ. 07): ವಿದ್ಯಾಪೀಠದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆಯವರ ಭಾಷಣಕ್ಕೆ ಅಡ್ಡಿಪಡಿಸಲಾಯಿತು ಎನ್ನುವ ಘಟನೆಗೆ ಸಂಬಂಧಿಸಿದಂತೆ ಟೀಂ ಮೋದಿ ಸ್ಪಷ್ಟನೆ ನೀಡಿದೆ.

Add Asianetnews Kannada as a Preferred SourcegooglePreferred

‘ನಿನ್ನೆ ವಿದ್ಯಾಪೀಠದಲ್ಲಿ ವಿಷ್ಣು ಸಹಸ್ರನಾಮ ಯಜ್ಞ ಕಾರ್ಯಕ್ರಮವಿತ್ತು. ಐದಾರು ತಿಂಗಳ ಮುನ್ನವೇ ’ರಾಷ್ಟ್ರಧರ್ಮ’ ಎನ್ನುವ ವಿಷಯದ ಕುರಿತು ಮಾತನಾಡಬೇಕೆಂದು ಚಕ್ರವರ್ತಿ ಸೂಲಿಬೆಲೆಯವರಿಗೆ ಹೇಳಲಾಗಿತ್ತು. ಅದೇ ರೀತಿ ಭಾಷಣ ಮಾಡಲು ಹೋದಾಗ ಕಾಂಗ್ರೆಸ್ಸಿನವರೊಂದಷ್ಟು ಮಂದಿ ಈ ಕಾರ್ಯಕ್ರಮಕ್ಕೆ ಬಂದು ಅಡ್ಡಿಪಡಿಸಿದರು. ಚಕ್ರವರ್ತಿ ಸೂಲಿಬೆಲೆಯವರು ಭಾರತ್ ಮಾತಾ ಕಿ ಜೈ ಎಂದರೆ ಅವರು ರಾಹುಲ್ ಗೆ ಜೈಕಾರ ಕೂಗಿದರು. 

’ಕೈ’ ಕಾರ್ಯಕರ್ತರಿಂದ ಭಾಷಣಕ್ಕೆ ಅಡ್ಡಿ; ಹಿಂತಿರುಗಿದ ಚಕ್ರವರ್ತಿ ಸೂಲಿಬೆಲೆ

ಇಷ್ಟಾದರೂ ಚಕ್ರವರ್ತಿಯವರು ಕಾರ್ಯಕ್ರಮದಲ್ಲಿ ’ಭಾರತ ವೈಭವ’ ದ ಕಥನವನ್ನು ಸಂಪೂರ್ಣ ಜನರ ಮುಂದಿಟ್ಟರು. ಕಾಂಗ್ರೆಸ್ಸಿನವರು ವಿರೋಧ ವ್ಯಕ್ತಪಡಿಸುತ್ತಿದ್ದರೆ ಒಂದಷ್ಟು ದೇಶಭಕ್ತರು ವಂದೇ ಮಾತರಂ, ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿ ಕಾಂಗ್ರೆಸ್ಸಿಗರ ಬಾಯ್ಮುಚ್ಚಿಸಿದರು’ ಎಂದು ಟೀಂ ಮೋದಿ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದೆ.