ಈ ವರ್ಷದ ಕೊನೆಯ ತಿಂಗಳಿನಲ್ಲಿ ಇದ್ದೇವೆ. ಇನ್ನೇನು 2019ಕ್ಕೆ ಕಾಲಿಡಲು ಸಜ್ಜಾಗುತ್ತಿದ್ದೇವೆ.  ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ 2018ಕ್ಕೆ ಗುಡ್ ಬೈ ಹೇಳುವ ಪ್ರಕ್ರಿಯೆಯೂ ಆರಂಭವಾಗಿದೆ.

ಬೆಂಗಳೂರು[ಡಿ.06]  ಯಾರಿಗೆ ರಜೆ ಕೊಟ್ಟರೂ ಸೋಶಿಯಲ್ ಮೀಡಿಯಾಕ್ಕೆ ರಜೆ ಇಲ್ಲ. 2018ರ ಅತ್ಯಂತ ಜನ ಮೆಚ್ಚುಗೆಯ ಟ್ವೀಟ್ ಯಾವುದು?

ಹೌದು.. ಇಂಥದ್ದೊಂದು ಪ್ರಶ್ನೆ ಎದುರಾದರೆ ಅದಕ್ಕೆ ಉತ್ತರ ಕರವಾಚೌತ್‌ ಸಂದರ್ಭ ಪತ್ನಿ ಅನುಷ್ಕಾಗೆ ಶುಭಹಾರೈಸಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾಡಿದ್ದ ಟ್ವೀಟ್ ಅತಿ ಮೆಚ್ಚುಗೆಯ ಟ್ವೀಟ್ ಎಂಬ ಖ್ಯಾತಿ ಪಡೆದುಕೊಂಡಿದೆ.

ಅಕ್ಟೋಬರ್ 27 ರಂದು ಮಾಡಿದ್ದ ಟ್ವೀಟ್ 2 ಲಕ್ಷಕ್ಕೂ ಅಧಿಕ ಲೈಕ್ ಪಡೆದುಕೊಂಡಿದ್ದರೆ 14000 ರಿ ಟ್ವೀಟ್ ಆಗಿತ್ತು. ವಿರುಷ್ಕಾ ಆರತಕ್ಷತೆಗೆ ಭೇಟಿ ನೀಡಿದ್ದ ಪೋಟೋವನ್ನು ನರೇಂದ್ರ ಮೋದಿ ಹಂಚಿಕೊಂಡಿದ್ದರು. ಇದಕ್ಕೂ ಸಹ 19 ಲಕ್ಷ ಲೈಕ್ ದೊರೆತಿತ್ತು.

Scroll to load tweet…