ವಿಜಯಪುರ ಜಿಲ್ಲೆ ಶಿಕ್ಷಣ ಇಲಾಖೆಗೆ ಇಚ್ಛಾಶಕ್ತಿ ಕೊರತೆಯೋ ಅಥವಾ ಶಿಕ್ಷಕರ ನಿರ್ಲಕ್ಷ್ಯದ ಪರಮಾವಧಿಯೋ ಗೊತ್ತಿಲ್ಲ. ಬುದ್ಧಿ ಹೇಳಬೇಕಾದ ಶಿಕ್ಷಕರಿಗೇ ಬುದ್ಧಿ ಹೇಳಬೇಕಾಗಿರುವ ದುಸ್ಥಿತಿ ವಿಜಯಪುರದ ಜನರಿಗೆ ಬಂದೊದಗಿದೆ. ರಾಜ್ಯ ಸರ್ಕಾರ 2018ರೊಳಗೆ ಬಯಲು ಶೌಚಾಲಯ ಮುಕ್ತ ರಾಜ್ಯವನ್ನಾಗಿ ಮಾಡಲು ಸಂಕಲ್ಪ ತೊಟ್ಟಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕೂಡ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದೆ. ಆದ್ರೆ ಹೀಗೆ ಜಾಗೃತಿ ಮೂಡಿಸುತ್ತಿರುವ ಶಿಕ್ಷಕರೇ ಶೌಚಾಲಯ ಕಟ್ಟಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ.

ವಿಜಯಪುರ(ಜು.05): ವಿಜಯಪುರ ಜಿಲ್ಲೆ ಶಿಕ್ಷಣ ಇಲಾಖೆಗೆ ಇಚ್ಛಾಶಕ್ತಿ ಕೊರತೆಯೋ ಅಥವಾ ಶಿಕ್ಷಕರ ನಿರ್ಲಕ್ಷ್ಯದ ಪರಮಾವಧಿಯೋ ಗೊತ್ತಿಲ್ಲ. ಬುದ್ಧಿ ಹೇಳಬೇಕಾದ ಶಿಕ್ಷಕರಿಗೇ ಬುದ್ಧಿ ಹೇಳಬೇಕಾಗಿರುವ ದುಸ್ಥಿತಿ ವಿಜಯಪುರದ ಜನರಿಗೆ ಬಂದೊದಗಿದೆ. ರಾಜ್ಯ ಸರ್ಕಾರ 2018ರೊಳಗೆ ಬಯಲು ಶೌಚಾಲಯ ಮುಕ್ತ ರಾಜ್ಯವನ್ನಾಗಿ ಮಾಡಲು ಸಂಕಲ್ಪ ತೊಟ್ಟಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕೂಡ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದೆ. ಆದ್ರೆ ಹೀಗೆ ಜಾಗೃತಿ ಮೂಡಿಸುತ್ತಿರುವ ಶಿಕ್ಷಕರೇ ಶೌಚಾಲಯ ಕಟ್ಟಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ.

ವಿಜಯಪುರದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 938 ಜನ ಶಿಕ್ಷಕರು.. ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 332 ಜನ ಶಿಕ್ಷಕರು.. ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 783 ಶಿಕ್ಷಕರಿದ್ದಾರೆ.. ಆದ್ರೆ ಇದರಲ್ಲಿ ಯಾರೊಬ್ಬರೂ ಕೂಡ ತಮ್ಮ ಮನೆಗೆ ಶೌಚವನ್ನೇ ನಿರ್ಮಿಸಿಕೊಂಡಿಲ್ಲ. ಇವರೆಲ್ಲ ಇಂದಿಗೂ ಬಯಲು ಶೌಚವನ್ನೇ ಅವಲಂಭಿಸಿದ್ದಾರೆ.

ಇನ್ನೂ ಇಂಥ ಶಿಕ್ಷಕರು ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಬಯಲು ಶೌಚಾಲಯದ ಬಗ್ಗೆ ಅರಿವು ಮೂಡಿಸುತ್ತಾರೋ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇನ್ನೂ ಈ ಬಗ್ಗೆ ಕಟ್ಟು ನಿಟ್ಟಿನ ಆದೇಶ ನೀಡಬೇಕಾದ ಅಧಿಕಾರಿಗಳೇ ದಿವ್ಯ ನಿರ್ಲಕ್ಷ್ಯ ತೋರಿರುವುದೇ ಯೋಜನೆ ಹಳ್ಳ ಹಿಡಿಯಲು ಕಾರಣವಾಗಿದೆ.

ಒಟ್ಟಾರೆ ಕೈತುಂಬ ಸಂಬಳ ಪಡೆಯುವ ಶಿಕ್ಷಕರೇ ತಮ್ಮ ತಮ್ಮ ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗದಿರೊದು ದುರಂತವೇ ಸರಿ. ಇಂಥ ಯಡವಟ್ಟು ಪ್ರಜ್ಞಾವಂತ ನಾಗರಿಕ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿದೆ.