ಯೋಗ ದಿನಾಚರಣೆ ಕಾರ್ಯಕ್ರಮದಲ್ಲೇ ಹೃದಯಾಘಾತದಿಂದ ಶಿಕ್ಷಕರೊಬ್ಬರು ಸಾವನ್ನಪ್ಪಿದ್ದಾರೆ.  ತೇರದಾಳ ಪಟ್ಟಣದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.  

ಬಾಗಲಕೋಟೆ (ಜೂ. 21): ಯೋಗ ದಿನಾಚರಣೆ ಕಾರ್ಯಕ್ರಮದಲ್ಲೇ ಹೃದಯಾಘಾತದಿಂದ ಶಿಕ್ಷಕರೊಬ್ಬರು ಸಾವನ್ನಪ್ಪಿದ್ದಾರೆ. ತೇರದಾಳ ಪಟ್ಟಣದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯೋಗ ಮಾಡುವ ವೇಳೆ ಹೃದಯಾಘಾತದಿಂದ ಶಿಕ್ಷಕ ವಿಶ್ವನಾಥ ಬಿರಾದಾರ ಸಾವನ್ನಪ್ಪಿದ್ದಾರೆ. ಜೆವಿ ಮಂಡಳ ಕ್ಯಾಂಪಸ್​ನಲ್ಲಿ ನಡೆಯುತ್ತಿದ್ದ ಯೋಗ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಶಿಕ್ಷಕರ ನಿಧನಕ್ಕೆ ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ಆಘಾತಗೊಂಡಿದ್ದಾರೆ. 

ಇಂದು ಅಂತರಾಷ್ಟ್ರೀಯ ವಿಶ್ವ ಯೋಗ ದಿನ. ವಿಶ್ವದಾದ್ಯಂತ ಜನರು ಯೋಗ ಮಾಡುವ ಮೂಲಕ ಈ ದಿನವನ್ನು ಸಂಪನ್ನವಾಗಿಸಿದ್ದಾರೆ. ಇದು ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನ. ಪ್ರಧಾನಿ ಮೋದಿಯವರು ಯೋಗ ದಿನವನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದ್ದಾರೆ.