ಶಾಲೆಯ ಉಪ ಪ್ರಾಂಶುಪಾಲ ಡಾಮ್ನಿಕ್‌, ಸುಮಾರು 20 ವಿದ್ಯಾರ್ಥಿಗಳಿಗೆ ಬಾಸುಂಡೆ ಬರುವಂತೆ ಥಳಿಸಿದ್ದಾನೆ.
ಕೇವಲ ಇಂಗ್ಲೀಷ್ ಬುಕ್ ತಂದಿಲ್ಲಾ ಅನ್ನೋ ಒಂದೇ ಕಾರಣಕ್ಕೆ ಶಿಕ್ಷಕನೊಬ್ಬ ವಿದ್ಯಾರ್ಥಿಗಳಿಗೆ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನ ಡಿ.ಎಂ ಪಾಳ್ಯದಲ್ಲಿರುವ ಡಾನ್ ಬಾಸ್ಕೋ ಶಾಲೆಯಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ಶಾಲೆಯ ಉಪ ಪ್ರಾಂಶುಪಾಲ ಡಾಮ್ನಿಕ್, ಸುಮಾರು 20 ವಿದ್ಯಾರ್ಥಿಗಳಿಗೆ ಬಾಸುಂಡೆ ಬರುವಂತೆ ಥಳಿಸಿದ್ದಾನೆ. 7ನೇ ತರಗತಿಯ ಮಹಮದ್ ಸೈಫ್,ಅಭಿಷೇಕ್, ಮೋಹನ್, ಧನುಷ್ ಸೇರಿದಂತೆ ಹಲವು ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಉಪ ಪ್ರಾಂಶುಪಾಲ ಡಾಮ್ನಿಕ್ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
