ನವದೆಹಲಿ: ವಿವಿಧ ವೇಷ ತೊಟ್ಟು ಸಂಸತ್ತಿಗೆ ಆಗಮಿಸಿ ಎಲ್ಲರ ಗಮನ ಸೆಳೆಯುವ ಟಿಡಿಪಿ ಸಂಸದ, ಮಾಜಿ ನಟ ನರಮಲ್ಲಿ ಶಿವಪ್ರಸಾದ್‌, ಗುರುವಾರ, ಜರ್ಮನಿಯ ಮಾಜಿ ಸರ್ವಾಧಿಕಾರಿ ಹಿಟ್ಲರ್‌ ವೇಷದಲ್ಲಿ ಆಗಮಿಸಿ ವಿಶೇಷ ರೀತಿಯಲ್ಲಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. 

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಟಿಡಿಪಿಯ ಆಗ್ರಹವನ್ನು ಪುನರುಚ್ಚರಿಸುವ ನಿಟ್ಟಿನಲ್ಲಿ ಮತ್ತು ಈ ವಿಷಯದಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ವಿರೋಧಿಸುವ ನಿಟ್ಟಿನಲ್ಲಿ ಶಿವಪ್ರಸಾದ್‌ ಅವರು ಹಿಟ್ಲರ್‌ ವೇಷ ಧರಿಸಿ ಬಂದಿದ್ದರು. 

ಕೆಲ ದಿನಗಳ ಹಿಂದಷ್ಟೇ ಅವರು ಶ್ರೀರಾಮನ ಅವತಾರದಲ್ಲಿ, ಅದಕ್ಕೂ ಮೊದಲು ನಾರದ, ಸತ್ಯಸಾಯಿ ಸೇರಿದಂತೆ ವಿನೂತನ ಶೈಲಿಯಲ್ಲಿ ವೇಷ ಧರಿಸಿ ಸಂಸತ್ತಿಗೆ ಆಗಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.