Asianet Suvarna News Asianet Suvarna News

ಎಚ್‌-1ಬಿ ವೀಸಾ ಶೇ.70ರಷ್ಟು ಕಡಿತ ಮಾಡಿದ ಟಿಸಿಎಸ್‌

2015ನೇ ಸಾಲಿನಲ್ಲಿ ಎಚ್‌-1ಬಿ ವೀಸಾದಡಿ ಅಮೆರಿಕಕ್ಕೆ ಕಳುಹಿಸಿದ್ದ ನೌಕರರ ಸಂಖ್ಯೆಗೆ ಹೋಲಿಸಿದರೆ, ಪ್ರಸಕ್ತ ವರ್ಷದಲ್ಲಿ ಕಂಪನಿ ಮೂರನೇ ಒಂದರಷ್ಟುನೌಕರರನ್ನು ಮಾತ್ರವೇ ಅಮೆರಿಕಕ್ಕೆ ರವಾನಿಸಿದೆ. ಇಲ್ಲಿಂದ ನೌಕರರನ್ನು ಕಳುಹಿಸುವ ಬದಲು ಅಮೆರಿಕದಲ್ಲಿನ ಎಂಜಿನಿಯರಿಂಗ್‌ ಕಾಲೇಜು ಹಾಗೂ ಬಿ-ಸ್ಕೂಲ್‌ಗಳಿಂದಲೇ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

TCC Cuts H1B Visas

ನವದೆಹಲಿ: ಎಚ್‌-1ಬಿ ವೀಸಾದಡಿ ಬರುವ ಭಾರತೀಯ ನೌಕರರು ತಮ್ಮ ಉದ್ಯೋಗ ಕಿತ್ತುಕೊಳ್ಳುತ್ತಿದ್ದಾರೆ ಎಂಬ ಆಕ್ರೋಶ ಅಮೆರಿಕದಲ್ಲಿ ಕೇಳಿಬಂದ ಬೆನ್ನಲ್ಲೇ ಆ ವೀಸಾದಡಿ ಅಮೆರಿಕಕ್ಕೆ ರವಾನಿಸುವ ನೌಕರರ ಸಂಖ್ಯೆಯನ್ನು ದೇಶದ ಪ್ರಮುಖ ಸಾಫ್ಟ್‌ವೇರ್‌ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸವೀರ್‍ಸಸ್‌ (ಟಿಸಿಎಸ್‌) ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ.

2015ನೇ ಸಾಲಿನಲ್ಲಿ ಎಚ್‌-1ಬಿ ವೀಸಾದಡಿ ಅಮೆರಿಕಕ್ಕೆ ಕಳುಹಿಸಿದ್ದ ನೌಕರರ ಸಂಖ್ಯೆಗೆ ಹೋಲಿಸಿದರೆ, ಪ್ರಸಕ್ತ ವರ್ಷದಲ್ಲಿ ಕಂಪನಿ ಮೂರನೇ ಒಂದರಷ್ಟುನೌಕರರನ್ನು ಮಾತ್ರವೇ ಅಮೆರಿಕಕ್ಕೆ ರವಾನಿಸಿದೆ. ಇಲ್ಲಿಂದ ನೌಕರರನ್ನು ಕಳುಹಿಸುವ ಬದಲು ಅಮೆರಿಕದಲ್ಲಿನ ಎಂಜಿನಿಯರಿಂಗ್‌ ಕಾಲೇಜು ಹಾಗೂ ಬಿ-ಸ್ಕೂಲ್‌ಗಳಿಂದಲೇ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಇದರಿಂದಾಗಿ ಎಚ್‌-1ಬಿ ವೀಸಾ ಬೇಡಿಕೆ ಕಡಿಮೆಯಾಗಿದೆ ಎಂದು ಟಿಸಿಎಸ್‌ನ ಅಧಿಕಾರಿ ಅಜಯ್‌ ಮುಖರ್ಜಿ ಅವರು ವಾರ್ಷಿಕ ವರದಿಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios