ನೀವು ಖರೀದಿಸಿದ ದುಬಾರಿ ವಾಚ್, ಕಾರು ಮುಂತಾದವುಗಳ ಫೋಟೋವನ್ನು ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್’ನಲ್ಲಿ ಹಾಕುವುದರಿಂದ ಇನ್ಮುಂದೆ ತೆರಿಗೆ ಅಧಿಕಾರಿಗಳು ನಿಮ್ಮ ಬಾಗಿಲು ತಟ್ಟುವ ಸಾಧ್ಯತೆಗಳಿವೆ.
ನವದೆಹಲಿ: ನೀವು ಖರೀದಿಸಿದ ದುಬಾರಿ ವಾಚ್, ಕಾರು ಮುಂತಾದವುಗಳ ಫೋಟೋವನ್ನು ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್’ನಲ್ಲಿ ಹಾಕುವುದರಿಂದ ಇನ್ಮುಂದೆ ತೆರಿಗೆ ಅಧಿಕಾರಿಗಳು ನಿಮ್ಮ ಬಾಗಿಲು ತಟ್ಟುವ ಸಾಧ್ಯತೆಗಳಿವೆ.
ಕಪ್ಪು ಹಣ ಪತ್ತೆಹಚ್ಚಲು ತೆರಿಗೆ ಇಲಾಖೆಯು ‘ಪ್ರಾಜೆಕ್ಟ್ ಇನ್’ಸೈಟ್’ ಎಂಬ ಯೋಜನೆಗೆ ಮುಂದಿನ ತಿಂಗಳು ಚಾಲನೆ ನೀಡಲಿದ್ದು, ಸೋಶಿಯಲ್ ಮೀಡಿಯಾದಲ್ಲಿ ನೀವು ಹಾಕುವ ಪೋಸ್ಟ್’ಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸುವುದೆಂದು ವರದಿಯಾಗಿದೆ.
ಈ ಹೊಸ ಯೋಜನೆಯಲ್ಲಿ, ಸೋಶಿಯಲ್ ಮೀಡಿಯಾ ಮೂಲಕ ಕಲೆಹಾಕಿರುವ ಮಾಹಿತಿಯನ್ನು ಬಿಗ್ ಡಾಟ ಅನಾಲಿಸಿಸ್’ಗೊಳಪಡಿಸಿ ನಿಮ್ಮ ಆದಾಯ ಹಾಗೂ ಖರ್ಚುಗಳ ಸ್ವರೂಪವನ್ನು ವಿಶ್ಲೇಷಸಿ, ತೆರಿಗೆ ವಂಚನೆ ಹಾಗೂ ಕಪ್ಪು ಹಣವನ್ನು ಪತ್ತೆಹಚ್ಚಲಾಗುತ್ತದೆ.
ಯೋಜನೆಯನ್ನು ಜಾರಿಗೊಳಿಸಲು ಎಲ್&ಟಿ ಇನ್ಪೋಟೆಕ್’ನೊಂದಿಗೆ ಕಳೆದ ವರ್ಷ ಒಪ್ಪಂದ ಮಾಡಿಕೊಳ್ಳಲಾಗಿದೆ.
