ಪ್ರಧಾನಿ ಮೋದಿ ಸ್ನೇಹಿತಗೆ ಜನ 1 ಲಕ್ಷ ಕೋಟಿ ಕೊಡಬೇಕು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 29, Jul 2018, 12:22 PM IST
Tax payers will pay Rs 1 lakh cr to Mr 56 friend for Rafale deal  Says Rahul Gandhi
Highlights

ಪ್ರಧಾನಿ ಮೋದಿ ಸ್ನೇಹಿತಗೆ ಜನ 1 ಲಕ್ಷ ಕೋಟಿ ಕೊಡಬೇಕು. ಮುಂದಿನ 50  ವರ್ಷಗಳ ಕಾಲ 1 ಲಕ್ಷ ಕೋಟಿ ರು. ನೀಡಬೇಕಾಗುತ್ತದೆ ಎಂದು  ಎಐಸಿಸಿ ಅಧ್ಯಕ್ಷ  ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ದೇಶ ಖರೀದಿಸುತ್ತಿರುವ ರಫೇಲ್ ವಿಮಾನ ನಿರ್ವಹಣೆಗೆ ತೆರಿಗೆದಾರರು ‘ಮಿಸ್ಟರ್- 56  ಅವರ  ಸ್ನೇಹಿತ’ನಿಗೆ ಮುಂದಿನ 50  ವರ್ಷಗಳ ಕಾಲ 1 ಲಕ್ಷ ಕೋಟಿ ರು.
ನೀಡಬೇಕಾಗುತ್ತದೆ ಎಂದು ಲೇವಡಿ  ಮಾಡಿದ್ದಾರೆ. 

ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಬಗ್ಗೆ ಹೂಡಿಕೆ ದಾರರೊಬ್ಬರ ಟಿಪ್ಪಣಿಯನ್ನು ತಮ್ಮ ಹೇಳಿಕೆಯ ಜೊತೆ ಲಗತ್ತಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ರಫೇಲ್ ಒಪ್ಪಂದದ ಕುರಿತಾದ ಸತ್ಯ ಇಲ್ಲಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಪಾಕಿಸ್ತಾನ ಮತ್ತು ಚೀನಾವನ್ನು ಎದುರಿಸುವಾಗ ಮೋದಿ ಅವರು ತಮ್ಮ 56  ಇಂಚಿನ ವಿಶಾಲ ಎದೆಯನ್ನು ಪ್ರದರ್ಶಿಸಲಿದ್ದಾರೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಆದರೆ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ.

loader