Asianet Suvarna News Asianet Suvarna News

ಬೆಂಗಳೂರಿನ 3 ಮಾಲ್'ಗಳಿಂದ 28 ಕೋಟಿ ರೂ. ತೆರಿಗೆ ವಂಚನೆ

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬು‘ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ 40 ಮಾಲ್, 70 ಟೆಕ್‌ಪಾರ್ಕ್ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಬೃಹತ್ ವಾಣಿಜ್ಯ ಮತ್ತು ವಸತಿ ಸಮುಚ್ಚಯಗಳಿವೆ. ಕೆಲವು ಕಟ್ಟಡಗಳ ಮಾಲೀಕರಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ ಪದ್ಧತಿಯಡಿಯಲ್ಲಿ ತೆರಿಗೆ ವಂಚನೆ ನಡೆಯುತ್ತಿದೆ.

Tax fraud from 3 Malls

ಬೆಂಗಳೂರು(ಸೆ.21): ಬೃಹತ್ ಕಟ್ಟಡಗಳ ಆಸ್ತಿ ತೆರಿಗೆ ವಂಚನೆ ಪತ್ತೆಗಾಗಿ ಬಿಬಿಎಂಪಿ ಕೈಗೊಂಡಿದ್ದ ಮೊದಲ ಹಂತದ 55 ಬೃಹತ್ ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೇ ವೇಳೆ ಹಲವು ಕಟ್ಟಡಗಳ ಮಾಲೀಕರು ನೂರಾರು ಕೋಟಿ ರು. ಆಸ್ತಿ ತೆರಿಗೆ ವಂಚನೆ ಮಾಡಿರುವುದು ಕಂಡು ಬಂದಿದೆ.

ಈ ರೀತಿ ತೆರಿಗೆ ವಂಚಿಸಿರುವವರಿಂದ ದುಪ್ಪಟ್ಟು ತೆರಿಗೆ ಮತ್ತು ದಂಡ ವಸೂಲಿಗೆ ಕ್ರಮ ಕೈಗೊಳ್ಳಲಾ ಗುತ್ತಿದ್ದು, ಕಟ್ಟಡ ಮಾಲೀಕರಿಗೆ ಡಿಮ್ಯಾಂಡ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ 40 ಮಾಲ್, 70 ಟೆಕ್‌ಪಾರ್ಕ್ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಬೃಹತ್ ವಾಣಿಜ್ಯ ಮತ್ತು ವಸತಿ ಸಮುಚ್ಚಯಗಳಿವೆ. ಕೆಲವು ಕಟ್ಟಡಗಳ ಮಾಲೀಕರಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ ಪದ್ಧತಿಯಡಿಯಲ್ಲಿ ತೆರಿಗೆ ವಂಚನೆ ನಡೆಯುತ್ತಿದೆ.

ಹೀಗಾಗಿ ಅನುಮಾನವಿರುವ ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೆ ನಡೆಸಲಾಗುತ್ತಿದೆ. ಮೊದಲ ಹಂತ ದಲ್ಲಿ 55 ಕಟ್ಟಡಗಳ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಹಲವು ಕಟ್ಟಡಗಳ ಮಾಲೀಕರು ಸ್ವಯಂ ಘೋಷಣೆಯಡಿ ಪಾವತಿಸಿರುವ ತೆರಿಗೆ ಹಣಕ್ಕೂ, ಸರ್ವೆ ಅಂಶಗಳ ಪ್ರಕಾರ ಪಾವತಿಸಬೇಕಾದ ತೆರಿಗೆಗೂ ಭಾರೀ ವ್ಯತ್ಯಾಸ ಕಂಡುಬಂದಿದ್ದು, ನೂರಾರು ಕೋಟಿ ರು.ಗೂ ಹೆಚ್ಚು ಆಸ್ತಿ ತೆರಿಗೆ ವಂಚನೆಯಾಗಿರುವುದು ಪತ್ತೆಯಾಗಿದೆ ಎಂದು ಹೇಳಿದರು.

ಆಸ್ತಿ ತೆರಿಗೆ ವಂಚಿಸಿರುವ ಎಲ್ಲಾ ಬೃಹತ್ ಕಟ್ಟಡಗಳ ಮಾಲೀಕರಿಗೆ ಸ್ಟೇಷನ್ ಸರ್ವೇ ಪ್ರಕಾರ ಪಾವತಿಸಬೇಕಾದ ಬಾಕಿ ತೆರಿಗೆ ಪಾವತಿಸುವಂತೆ ಡಿಮ್ಯಾಂಡ್ ನೋಟಿಸ್ ಜಾರಿ ಮಾಡಲಾಗುತ್ತಿದೆ. ವಂಚಿಸಿರುವ ತೆರಿಗೆಗೆ ದುಪ್ಪಟ್ಟು ಹಣ ಮತ್ತು ದಂಡ ವಸೂಲಿ ಮಾಡಲಾಗುವುದು. ಈಗಾಗಲೇ ಬನ್ನೇರುಘಟ್ಟ ರಸ್ತೆಯ ಗೋಪಾಲನ್ ಮಾಲ್‌ನಿಂದ 5.11 ಕೋಟಿ ರು., ಸಲಾರ್ಪುರಿಯಾ ಓಯಸಿಸ್ ಮಾಲ್‌ನಿಂದ 11.7 ಕೋಟಿ ರು. ಮತ್ತು ನೆಸ್ ಮಾಲ್ ನಿಂದ 11.60 ಕೋಟಿ ರು. ತೆರಿಗೆ ವಂಚನೆಯಾಗಿದೆ. ಈ ಮೂರು ಮಾಲ್‌ಗಳಿಂದ ದುಪ್ಪಟ್ಟು ತೆರಿಗೆ ಮತ್ತು ದಂಡ ಸೇರಿ ಒಟ್ಟಾರೆ 28 ಕೋಟಿ ರು. ನಷ್ಟು ತೆರಿಗೆ ವ್ಯತ್ಯಾಸ ಕಂಡುಬಂದಿದ್ದು, ಕಳೆದ ಸೆ.17ರಂದು ಬಾಕಿ ತೆರಿಗೆಗೆ ಡಿಮ್ಯಾಂಡ್ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ತಲುಪಿದ 20 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು. ಶೀಘ್ರ ಎಲ್ಲಾ ಕಟ್ಟಡಗಳಿಗೂ ನೋಟಿಸ್: ಸದ್ಯ ಮೂರು ಕಟ್ಟಡಗಳ ತೆರಿಗೆ ವಂಚನೆ ಲೆಕ್ಕಾಚಾರ ಮಾಡಲಾಗಿದೆ. ಸ್ಟೇಷನ್ ಸರ್ವೆ ಅಂಶ ಆ‘ರಿಸಿ ಉಳಿದ 52 ಕಟ್ಟಡಗಳ ತೆರಿಗೆ ಪಾವತಿ ದಾಖಲಾತಿಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ನೂರಾರು ಕೋಟಿ ರು. ವಂಚನೆಯಾಗಿರುವ ಸಾಧ್ಯಾತೆ ಇದೆ ಎಂದು ಹೇಳಿದರು.

ಮ್ಯಾನ್ಯುಯಲ್ ಪ್ರಕಾರ ವಾಣಿಜ್ಯ ಕಟ್ಟಡಗಳ ಸರ್ವೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೆ, ಇದುವರೆಗೂ ಶೇ.25ರಿಂದ 30ರಷ್ಟು ಮಾತ್ರ ನಡೆಸಿದ್ದಾರೆ ಎಂದು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.

ಯಾವ ಮಾಲ್, ಎಷ್ಟು ತೆರಿಗೆ ಪಾವತಿಸಬೇಕು? ?

ಗೋಪಾಲನ್ ಮಾಲ್: 5.11 ಕೋಟಿ ?

ಸಲಾರ್ಪುರಿಯಾ ಓಯಸಿಸ್ ಮಾಲ್: 11.78 ಕೋಟಿ ರು. ?

ನೆಸ್ ಮಾಲ್: 11.97 ಕೋಟಿ ರು

 

Follow Us:
Download App:
  • android
  • ios