ದೇಶದ ರಿಯಲ್ ಎಸ್ಟೇಟ್ ಡೆವಲಪ್’ಮೆಂಟ್ ಕಂಪನಿಗಳಲ್ಲಿ ಒಂದಾಗಿರುವ ಟಾಟಾ ಹೌಸಿಂಗ್‌ನ ಅಂಗ ಸಂಸ್ಥೆಯಾದ ಟಾಟಾ ವ್ಯಾಲ್ಯೂ ಹೋಮ್ಸ್ 99 ಗಂಟೆಗಳ ‘ಫ್ಲಾಶ್ ಸೇಲ್’ ಕೊಡುಗೆ ಘೋಷಿಸಿದೆ.

ಬೆಂಗಳೂರು: ದೇಶದ ರಿಯಲ್ ಎಸ್ಟೇಟ್ ಡೆವಲಪ್’ಮೆಂಟ್ ಕಂಪನಿಗಳಲ್ಲಿ ಒಂದಾಗಿರುವ ಟಾಟಾ ಹೌಸಿಂಗ್‌ನ ಅಂಗ ಸಂಸ್ಥೆಯಾದ ಟಾಟಾ ವ್ಯಾಲ್ಯೂ ಹೋಮ್ಸ್ 99 ಗಂಟೆಗಳ ‘ಫ್ಲಾಶ್ ಸೇಲ್’ ಕೊಡುಗೆ ಘೋಷಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರಲ್ಲಿ ಗ್ರಾಹಕರು ಆಯ್ದ ಬ್ಯಾಂಕ್‌ಗಳಲ್ಲಿ ಶೇ.99ರಷ್ಟು ಸಾಲ ಸೌಲಭ್ಯವನ್ನು ಪಡೆದು ತಮ್ಮ ಕನಸಿನ ಮನೆಯನ್ನು ಖರೀದಿಸಲು ಅನುಕೂಲ ಕಲ್ಪಿಸಲಾಗಿದೆ.

ಈ ವಿಶೇಷ ಯೋಜನೆ ನ.2ರಿಂದ 6ರವರೆಗೆ ಮಾತ್ರ ಇರಲಿದೆ. ಆಸಕ್ತ ಗ್ರಾಹಕರು ನ.1ರವರೆಗೆ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಅಗತ್ಯ ಮಾಹಿತಿಗಳನ್ನು ದಾಖಲಿಸಿ ನೋಂದಣಿಯಾಗಬೇಕು.

ಈ ಅವಧಿಯಲ್ಲಿ ಸಾಲ ಸೌಲಭ್ಯದ ಬಗ್ಗೆ ಕೇವಲ ಅರ್ಧ ಗಂಟೆಯಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ರಾಜೀಬ್ ದಾಸ್ ತಿಳಿಸಿದ್ದಾರೆ.

ಬೆಂಗಳೂರಿನ ನ್ಯೂ ಹೆವನ್, ಚೆನ್ನೈ ಸಂತೋರಿಣಿ, ನ್ಯೂ ಹೆವನ್ ರಿಬನ್ ವಾಕ್, ತೆಲಂಗಾಣದ ಲಾ ಮೊಂಟಾನ, ಬಹದ್ದೂರ್ ನಗರದ ನ್ಯಾಹೆಚನ್, ಅಹಮದಾಬಾದ್ ನ್ಯೂ ಹೆವನ್ ಕಾಂಪ್ಯಾಕ್ಟ್ ಮತ್ತು ಶುಭ ಗೃಹ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಟಾಟಾ ವ್ಯಾಲ್ಯೂ ಹೋಮ್ಸ್ ಮನೆಗಳನ್ನು ನಿರ್ಮಿಸಿದೆ.

ಈ ವಿಶೇಷ ಕೊಡುಗೆಯಡಿಯಲ್ಲಿ ಮೊದಲ 99 ಗ್ರಾಹಕರು 99 ಮನೆಗಳನ್ನು ಖರೀದಿ ಮಾಡಬಹುದಾಗಿ ಎಂದು ಅವರು ಮಾಹಿತಿ ನೀಡಿದ್ದಾರೆ.