ಮುಕೇಶ್‌ರ ಸೋದರ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಷನ್, ಟಾಟಾ ಟೆಲಿ ಸರ್ವೀಸಸ್ ಜೊತೆ ಕೈಜೋಡಿಸಲು ಮುಂದಾಗಿದೆ.
ಮುಂಬೈ(ಫೆ.20): ಮುಕೇಶ್ ಅಂಬಾನಿ ಒಡೆತನದ ಜಿಯೋ 4ಜಿ ಸೇವೆಯಿಂದ ಟೆಲಿಕಾಂ ವಲಯದಲ್ಲಿ ಉಂಟಾಗಿರುವ ತೀವ್ರ ಸ್ಪರ್ಧೆಯನ್ನು ಎದುರಿಸುವ ನಿಟ್ಟಿನಲ್ಲಿ ಮುಕೇಶ್ರ ಸೋದರ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಷನ್, ಟಾಟಾ ಟೆಲಿ ಸರ್ವೀಸಸ್ ಜೊತೆ ಕೈಜೋಡಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಟಾಟಾ ಸನ್ಸ್ನ ನೂತನ ಮುಖ್ಯಸ್ಥರಾಗಿ ಮಂಗಳವಾರ ಅಕಾರ ಸ್ವೀಕರಿಸಲಿರುವ ಎನ್.ಚಂದ್ರಶೇಖರ್ ಜೊತೆಗೆ ಈಗಾಗಲೇ ಅನಿಲ್ ಅಂಬಾನಿ ಕೆಲ ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ರಿಲಯನ್ಸ್ ಕಮ್ಯುನಿಕೇಷನ್ ಈಗಾಗಲೇ ಎಂಟಿಎಸ್ ಅನ್ನು ವಿಲೀನ ಮಾಡಿಕೊಂಡಿದ್ದು, ಶೀಘ್ರವೇ ಏರ್ಸೆಲ್ ಅನ್ನೂ ಖರೀದಿಸಲು ಮಾತುಕತೆ ನಡೆಸುತ್ತಿದೆ.
