ಗಗನಯಾನಿಗಳು ಬಾಹ್ಯಾಕಾಶದಲ್ಲೇ ಸವಿಯಲಿದ್ದಾರೆ ಇಡ್ಲಿ-ಸಾಂಬಾರ್!
ಭಾರತೀಯ ಗಗನಯಾತ್ರಿಗಳಿಗೆ ಇಡ್ಲಿ-ಸಾಂಬಾರ್! ಗಗನಯಾತ್ರಿಗಳಿಗೆ ಬಾಹ್ಯಾಕಾಶದಲ್ಲೇ ಇಡ್ಲಿ ಸವಿಯುವ ಅವಕಾಶ! ಇಸ್ರೋ-ಡಿಎಫ್ಆರ್‌ಎಲ್ ನಡುವೆ ಮಹತ್ವದ ಮಾತುಕತೆ! ವಿವಿಧ ಆಹಾರ ಪದಾರ್ಥಗಳ ಪೂರೈಕೆಗೆ ಡಿಎಫ್ಆರ್‌ಎಲ್ ಒಪ್ಪಿಗೆ
ಬೆಂಗಳೂರು(ಸೆ.13): 2022ಕ್ಕೆ ಮಾನವಸಹಿತ ಗಗನಯಾನದಲ್ಲಿ ಪಾಲ್ಗೊಳ್ಳುವ ಭಾರತೀಯ ಗಗನಯಾತ್ರಿಗಳು ಬಾಹ್ಯಾಕಾಶದಲ್ಲೇ ಮೈಸೂರಿನ ಇಡ್ಲಿ-ಸಾಂಬರ್ ಸವಿಯಲಿದ್ದಾರೆ.
ಬಾಹ್ಯಾಕಾಶದಲ್ಲೇ ಗಗನಯಾತ್ರಿಗಳ ಉಪಾಹಾರ ಸೇವನೆಯ ಮ್ಯಾಜಿಕ್ ಗೆ ರಕ್ಷಣಾ ಇಲಾಖೆಯ ಸಂಶೋಧನಾ ಪ್ರಯೋಗಾಲಯ(ಡಿಎಫ್ಆರ್‌ಎಲ್) ಪ್ರಮುಖ ಪಾತ್ರ ವಹಿಸುತ್ತಿದೆ.
ಇಡ್ಲಿ-ಸಾಂಬರ್, ಮಾವಿನ ಹಣ್ಣಿನ ರಸ, ಶೈತ್ಯೀಕರಿಸಿದ ಹಣ್ಣಿನ ಜ್ಯೂಸ್ ಮತ್ತಿತರ ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಪ್ಯಾಕ್ ಮಾಡಿ ಪೂರೈಸುವ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಸ್ಧೆ(ಇಸ್ರೋ) ಜೊತೆ ಡಿಎಫ್ಆರ್‌ಎಲ್ ಮಾತುಕತೆ ನಡೆಸಿದೆ ಎನ್ನಲಾಗಿದೆ.
ಇನ್ನು ಎಲ್ಲವೂ ಅಂದುಕೊಂಡೆಂತೆ ಆದರೆ 2022ಕ್ಕೆ ನಮ್ಮ ವಿಜ್ಞಾನಿಗಳು ಬಾಹ್ಯಾಕಾಶದಲ್ಲೇ ಮೈಸೂರಿನ ಇಡ್ಲಿ-ವಡೆ, ಹಣ್ಣಿನ ರಸವನ್ನು ಸೇವಿಸಲಿದ್ದಾರೆ. ಡಿಎಫ್ಆರ್‌ಎಲ್ 1984ರಲ್ಲೇ ರಷ್ಯಾದ ಸೊಯುಜ್ ಟಿ-11 ಅಂತರಿಕ್ಷ ಯೋಜನೆ ಕೈಗೊಂಡ ವೇಳೆ ಗಗನಯಾತ್ರಿಗಳಿಗೆ ಆಹಾರ ಪೂರೈಸಿತ್ತು.