ತಾರಕ್ ಸಿನಿಮಾಗೆ ಪೈರಸಿ ಕಾಟ
ಬೆಂಗಳೂರು(ಸೆ.29): ಸ್ಯಾಂಡಲ್ ವುಡ್ ಗೆ ಪೈರಸಿ ಬಿಸಿ ತಟ್ಟಿದೆ. ಇತ್ತೀಚಿಗಷ್ಟೇ ಭರ್ಜರಿ ಸಿನಿಮಾದ ಪೈರಸಿಯಾಗಿ ವಿವಾದವಾಗಿತ್ತು. ಈಗ ದರ್ಶನ್ ಅಭಿಮಾನಿಗಳಿಗೂ ಪೈರಸಿ ಬಿಸಿ ತಟ್ಟಿದೆ. ಹೌದು. ತಾರಕ್ ಸಿನಿಮಾ ಫೇಸ್ ಬುಕ್ ಲೈವ್ ಮಾಡಿದ್ದಾರೆ. ದರ್ಶನ್ ರಗ್ಬಿ ಆಡೋ ದೃಶ್ಯ ಮತ್ತು ಸಿನಿಮಾದ ಕೆಲವು ತುಣುಕುಗಳನ್ನ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಹರಿದು ಬಿಟ್ಟಿದ್ದಾರೆ. ಇನ್ನು ದರ್ಶನ್ ಅಭಿಮಾನಿಗಳ ಕಿಡಿಗೇಡಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

