ಟ್ಯಾಪ್ಮಿಯಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸೂಕ್ತ ರೀತಿಯಾದ ತರಬೇತಿಯನ್ನು ಕೂಡ ನೀಡಲಾಗುತ್ತದೆ. ಒಟ್ಟಿನಲ್ಲಿ  ಸದ್ಯದ ಕಾರ್ಪೊರೇಟ್ ವಲಯದಲ್ಲಿನ ಅವಶ್ಯಕತೆಗೆ ತಕ್ಕಂತೆ ಇಲ್ಲಿ ವಿದ್ಯಾರ್ಥಿಗಳನ್ನು ತಯಾರುಗೊಳಿಸಲಾಗುವುದು. ಮಾನವ ಸಂಪನ್ಮೂಲ  ಇಲಾಖೆಯ ಸಂಪೂರ್ಣ ನಿರ್ವಹಣೆಗೆ ಸಂಬಂಧಿಸಿದಂತೆ ತರಬೇತಿಯನ್ನು ಒದಗಿಸಲಾಗುತ್ತದೆ.

ಮುಂಬೈ(ನ.18) ಸ್ನಾತಕೋತ್ತರ ಪದವಿಯಲ್ಲಿ ಸಂಪನ್ಮೂಲ ನಿರ್ವಹಣೆ ವಿಷಯವನ್ನು ಪರಿಚಯಿಸುವುದಾಗಿ ಟ್ಯಾಪ್ಮಿ (TA Pai Management Institution-TAPMI)ಯು ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದೆ. ಎಸ್'ಹೆಚ್ಆರ್'ಎಂನ ಸಹಯೋಗದೊಂದಿಗೆ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಅದು ಹೇಳಿದೆ.

ಈ ಕೋರ್ಸ್ ಯಶಸ್ವಿಯಾಗಿ ಮುಗಿಸಿದ ವಿದ್ಯಾರ್ಥಿಗಳಿಗೆ ಪಿಜಿ ಡಿಪ್ಲೊಮ ಪದವಿ ನೀಡುವುದಾಗಿಯೂ, ಬಳಿಕ ಎಸ್'ಹೆಚ್ಆರ್'ಎಂ’ನ ಗ್ಲೋಬಲ್ ಸರ್ಟಿಫಿಕೇಶನ್ ಪರೀಕ್ಷೆಯನ್ನು ಬರೆಯುವ ಅವಕಾಶವಿರುವುದು ಎಂದು ತಿಳಿಸಲಾಗಿದೆ.

ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕವಾದ ಗುಣ, ವಿಶ್ಲೇಷಣಾ ಕೌಶಲ್ಯ, ಬಲವರ್ಧನೆ, ಸಾಂಸ್ಥಿಕ ಸಂಬಂಧ ಮತ್ತು ಪರಸ್ಪರ ಕೌಶಲ್ಯಗಳನನ್ನು ಬೆಳೆಸುವ ನಿಟ್ಟಿನಲ್ಲಿ ಈ ಕೋರ್ಸನ್ನು ವಿನ್ಯಾಸಗೊಳಿಸಲಾಗಿದೆ.

ಟ್ಯಾಪ್ಮಿಯಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸೂಕ್ತ ರೀತಿಯಾದ ತರಬೇತಿಯನ್ನು ಕೂಡ ನೀಡಲಾಗುತ್ತದೆ. ಒಟ್ಟಿನಲ್ಲಿ ಸದ್ಯದ ಕಾರ್ಪೊರೇಟ್ ವಲಯದಲ್ಲಿನ ಅವಶ್ಯಕತೆಗೆ ತಕ್ಕಂತೆ ಇಲ್ಲಿ ವಿದ್ಯಾರ್ಥಿಗಳನ್ನು ತಯಾರುಗೊಳಿಸಲಾಗುವುದು. ಮಾನವ ಸಂಪನ್ಮೂಲ ಇಲಾಖೆಯ ಸಂಪೂರ್ಣ ನಿರ್ವಹಣೆಗೆ ಸಂಬಂಧಿಸಿದಂತೆ ತರಬೇತಿಯನ್ನು ಒದಗಿಸಲಾಗುತ್ತದೆ. ಅಂತಿಮವಾಗಿ ಈ ಮೂಲಕ ವಿದ್ಯಾರ್ಥಿಗಳು ಹೆಚ್ಆರ್ ವಲಯದಲ್ಲಿ ಸಂಪೂರ್ಣವಾಗಿ ಪರಿಣತಿಯನ್ನು ಪಡೆದುಕೊಳ್ಳುತ್ತಾರೆ.

ಸದ್ಯ ಹೆಚ್ಆರ್ ವಲಯದಲ್ಲಿ ಉದ್ಯೋಗವನ್ನು ಪಡೆದುಕೊಳ್ಳಲು ಯಾವ ರೀತಿಯಾದ ಪರಿಣತಿಯನ್ನು ಮಾರುಕಟ್ಟೆ ಬಯಸುತ್ತದೆಯೋ ಅದಕ್ಕೆ ಅನುಗುಣವಾಗಿಯೇ ಶಿಕ್ಷಣವನ್ನು ನೀಡಲು ಟ್ಯಾಪ್ಮಿ ಕಾರ್ಯತಂತ್ರ ರೂಪಿಸುತ್ತಿದೆ ಎಂದು ಸಂಸ್ಥೆಯ ಡೀನ್ ಸಿಮೋನ್ ಜಾರ್ಜ್ ಹೇಳಿದ್ದಾರೆ.

ಟ್ಯಾಪ್ಮಿ ಹೆಚ್ಆರ್ ವಿಭಾಗದ ಮುಖ್ಯಸ್ಥರಾದ ಕರ್ನಲ್ ಜೇಮ್ಸ್ ಅವರು ಮಾತನಾಡಿ ಈ ನಿಟ್ಟಿನಲ್ಲಿ ಎಸ್'ಹೆಚ್'ಆರ್'ಎಂನೊಂದಿಗೆ ಸೇರಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಸ್ನಾತಕೋತ್ತರ ಶಿಕ್ಷಣ ನೀಡಲು ಕಾರ್ಯತಂತ್ರ ರೂಪಿಸುತ್ತಿರುವ ಭಾರತದ ಮೊದಲ ಸಂಸ್ಥೆ ಟ್ಯಾಪ್ಮಿ ಆಗಿದೆ ಎಂದು ಹೇಳಿದರು.

ನಮ್ಮ ಕಾರ್ಯಕ್ರಮದ ಪ್ರಮುಖ ಉದ್ದೇಶವೆಂದರೆ ವ್ಯವಹಾರ ಉದ್ಯಮದಲ್ಲಿ ಬದಲಾವಣೆಗೆ ಕಾರಣವಾಗುವ ಮಾನವ ಸಂಪನ್ಮೂಲ ವೃತ್ತಿಪರತೆಯನ್ನು ಹೆಚ್ಚಿಸುವುದಾಗಿದೆ ಎಂದರು. ಇದೇ ವೇಳೆ ಟ್ಯಾಪ್ಮಿ 2018-20ನೇ ಬ್ಯಾಚ್ ದಾಖಲಾತಿ ಪ್ರಕ್ರಿಯೆ ಆರಂಭಿಸುವುದಾಗಿಯೂ ಈ ವೇಳೆ ಘೋಷಿಸಿತು.