ಶಾಲಾ SDMC ಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತವೆ ಎಂಬ ನಂಬಿಕೆಯಿಂದ ಶೂ ಹಾಗೂ ಸಮವಸ್ತ್ರ ಖರೀದಿಯಲ್ಲಿ ಪೋಷಕರ ಸಹಭಾಗಿತ್ವಕ್ಕೆ ಅವಕಾಶ ನೀಡಲಾಗಿತ್ತು. ಆದರೆ SDMCಗಳಲ್ಲಿನ ಪೋಷಕರೇ ಅವ್ಯವಹಾರದಲ್ಲಿ ಭಾಗಿಯಾಗಿದ್ದಕ್ಕೆ, ಇದೀಗ ಹೊಸ ನೀತಿ ರೂಪಿಸಲು ಚಿಂತನೆ ನಡೆಸುತ್ತಿದ್ದೇವೆ ಅಂತ  ಶಿಕ್ಷಣ ಸಚಿವ ತನ್ವೀರ್ ಸೇಠ್ ಅಭಿಪ್ರಾಯಪಟ್ಟಿದ್ದಾರೆ. 

ಧಾರವಾಡ(ಜು.19): ಶಾಲಾ SDMC ಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತವೆ ಎಂಬ ನಂಬಿಕೆಯಿಂದ ಶೂ ಹಾಗೂ ಸಮವಸ್ತ್ರ ಖರೀದಿಯಲ್ಲಿ ಪೋಷಕರ ಸಹಭಾಗಿತ್ವಕ್ಕೆ ಅವಕಾಶ ನೀಡಲಾಗಿತ್ತು. ಆದರೆ SDMCಗಳಲ್ಲಿನ ಪೋಷಕರೇ ಅವ್ಯವಹಾರದಲ್ಲಿ ಭಾಗಿಯಾಗಿದ್ದಕ್ಕೆ, ಇದೀಗ ಹೊಸ ನೀತಿ ರೂಪಿಸಲು ಚಿಂತನೆ ನಡೆಸುತ್ತಿದ್ದೇವೆ ಅಂತ ಶಿಕ್ಷಣ ಸಚಿವ ತನ್ವೀರ್ ಸೇಠ್ ಅಭಿಪ್ರಾಯಪಟ್ಟಿದ್ದಾರೆ. 

ದಾವಣಗೆರೆಯಲ್ಲಿ ಮಾತನಾಡಿದ ಅವರು, ಹಾವೇರಿಯಲ್ಲಿ ಸುವರ್ಣನ್ಯೂಸ್ ವರದಿಯಿಂದ ಶೂ- ಸಮವಸ್ತ್ರ ಖರೀದಿ ಅವ್ಯವಹಾರ ಬೆಳಕಿಗೆ ಬಂದಿದೆ. ಇದಕ್ಕೆ ಪ್ರತಿಯಾಗಿ 8 ಮುಖ್ಯಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಇದೀಗ ಶೂ ಹಾಗೂ ಸಮವಸ್ತ್ರ ಖರೀದಿ ಅಕ್ರಮ ತಡೆಗಟ್ಟಲು ಹೊಸ ನೀತಿ ರೂಪಿಸಲು ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿದ್ದೇನೆ. ಅಲ್ಲದೇ ಈಗಾಗಲೇ ಕೇಂದ್ರಸ್ಥಾನದಿಂದ ಪಠ್ಯಪುಸ್ತಕಗಳು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ರವಾನೆಯಾಗಿದ್ದು, ಶೀಘ್ರವೇ ಪಠ್ಯಪುಸ್ತಕ ಸಮಸ್ಯೆ ಬಗೆಹರಿಯುವುದಾಗಿ ತಿಳಿಸಿದರು.