ವಿಧಾನಸೌಧದಲ್ಲಿರುವ ತಮ್ಮ ಕೊಠಡಿಗೆ ಬೆಂಬಲಿಗರೊಂದಿಗೆ ನುಗ್ಗಿದ ಶಾಂತರಾಜು ಅವರು ಗೂಂಡಾವರ್ತನೆ ತೋರಿದರು. ಮೈಸೂರಿಗೆ ಬಂದರೆ ಒಂದು ಕೈ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದರು ಎಂದು ತನ್ವೀರ್ ಸೇಠ್ ಆರೋಪಿಸಿದ್ದಾರೆ.

ಬೆಂಗಳೂರು(ಏ. 11): ವಿಧಾನಸೌಧದಲ್ಲಿ ಸಚಿವ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆದ ಘಟನೆ ವರದಿಯಾಗಿದೆ. ಮೈಸೂರು ಎಸ್ಸಿ-ಎಸ್ಟಿ ನೌಕರರ ಸಂಘದ ಗೌರವಾಧ್ಯಕ್ಷ ಶಾಂತರಾಜು ಎಂಬುವವರು ತನ್ವೀರ್ ಸೇಠ್'ರ ಕೊರಳಪಟ್ಟಿ ಹಿಡಿದು ದಾಂಧಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಧಾನಸೌಧದಲ್ಲಿರುವ ತಮ್ಮ ಕೊಠಡಿಗೆ ಬೆಂಬಲಿಗರೊಂದಿಗೆ ನುಗ್ಗಿದ ಶಾಂತರಾಜು ಅವರು ಗೂಂಡಾವರ್ತನೆ ತೋರಿದರು. ಮೈಸೂರಿಗೆ ಬಂದರೆ ಒಂದು ಕೈ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದರು ಎಂದು ತನ್ವೀರ್ ಸೇಠ್ ಆರೋಪಿಸಿದ್ದಾರೆ.

ಶಾಂತರಾಜು ರಿಯಾಕ್ಷನ್:
ಪಿಯುಸಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ಶೇ.5ರಷ್ಟು ವಿನಾಯಿತಿ ನೀಡಬೇಕೆಂದಷ್ಟೇ ತಾನು ಮನವಿಕೊಂಡಿದ್ದು ಎಂದು ಶಾಂತರಾಜು ಸ್ಪಷ್ಟಪಡಿಸಿದ್ದಾರೆ. ಎಲ್ಲಾ ಇಲಾಖೆಗಳು ಎಸ್ಸಿ-ಎಸ್ಟಿ ಜನಾಂಗದವರಿಗೆ ವಿನಾಯಿತಿ ಕೊಡುತ್ತಿವೆ. ನಿಮ್ಮ ಇಲಾಖೆಯಲ್ಲೂ ಅದಕ್ಕೆ ಅವಕಾಶ ಮಾಡಿಕೊಡಿ ಎಂದು ತಾನು ಆ ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ "ಕುರ್ಚಿಯಿಂದ ಮೇಲೆದ್ದ ಸಚಿವರು, ಹೊಲೆ-ಮಾದಿಗರದ್ದೇ ನಮಗೆ ಕೆಲಸವೇನ್ರೀ ಎಂದು ರೇಗಿದರು" ಎಂದು ಶಾಂತರಾಜು ಹೇಳುತ್ತಾರೆ.

ಇದೇ ವೇಳೆ, ತನ್ವೀರ್ ಸೇಠ್ ವಿರುದ್ಧವೇ ತಾನು ದೂರು ದಾಖಲಿಸುತ್ತಿರುವುದಾಗಿಯೂ ಶಾಂತರಾಜು ಸುವರ್ಣನ್ಯೂಸ್'ಗೆ ತಿಳಿದ್ದಾರೆ.