"ರಾಜಕೀಯದಲ್ಲಿ ನಾನು ಗೌರವಿಸುವುದು ಕೆಲವೇ ವ್ಯಕ್ತಿಗಳನ್ನು. ನಿಸ್ಸಂಶಯವಾಗಿ ಇವರ ಪೈಕಿ ತನ್ವೀರ್ ಭಾಯ್ ಕೂಡ ಒಬ್ಬರು. ಇವರದು ಬಹಳ ಸಾದಾ ವ್ಯಕ್ತಿತ್ವ. ಆದ್ಯಾತ್ಮ ಚಿಂತಕ, ರಾಷ್ಟ್ರೀಯವಾದಿ. ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಶ್ರೇಷ್ಠ ಮಾನವ," ಎಂದು ಚಕ್ರವರ್ತಿ ಸೂಲಿಬೆಲೆ ಬರೆದುಕೊಂಡಿದ್ದಾರೆ.

ಬೆಂಗಳೂರು(ಸೆ. 17): ಖ್ಯಾತ ಬಲಪಂಥೀಯ ಚಿಂತಕ, ವಿಶ್ಲೇಷಕ, ಹೋರಾಟಗಾರ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯ ಅಚ್ಚುಮೆಚ್ಚಿನ ರಾಜಕಾರಣಿಗಳ್ಯಾರು? ನರೇಂದ್ರ ಮೋದಿ, ಅಮಿತ್ ಶಾ ಮೊದಲಾದ ಬಿಜೆಪಿ ನಾಯಕರ ಹೆಸರು ಸಹಜವಾಗಿಯೇ ಬರುತ್ತದೆ. ಆದರೆ, ಚಕ್ರವರ್ತಿಯವರ ಫೇವರಿಟ್ ರಾಜಕಾರಣಿಗಳ ಲಿಸ್ಟ್'ನಲ್ಲಿ ಜೆಡಿಎಸ್'ನ ಮುಖಂಡರೊಬ್ಬರು ಇದ್ದಾರಂತೆ. ಅದೂ ಮುಸ್ಲಿಮ್ ಮುಖಂಡರು. ಚಕ್ರವರ್ತಿ ಸೂಲಿಬೆಲೆ ತಮ್ಮ ಸೋಷಿಯಲ್ ಮೀಡಿಯಾ ತಾಣಗಳಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಜೆಡಿಎಸ್'ನ ರಾಷ್ಟ್ರೀಯ ವಕ್ತಾರ ತನ್ವೀರ್ ಅಹ್ಮದ್ ಅವರನ್ನು ಪ್ರಶಂಸಿಸಿ ಚಕ್ರವರ್ತಿ ಟ್ವೀಟ್ ಮಾಡಿದ್ದಾರೆ. ಫೇಸ್ಬುಕ್'ನಲ್ಲಿ ಪೋಸ್ಟ್ ಕೂಡ ಹಾಕಿದ್ದಾರೆ.

"ರಾಜಕೀಯದಲ್ಲಿ ನಾನು ಗೌರವಿಸುವುದು ಕೆಲವೇ ವ್ಯಕ್ತಿಗಳನ್ನು. ನಿಸ್ಸಂಶಯವಾಗಿ ಇವರ ಪೈಕಿ ತನ್ವೀರ್ ಭಾಯ್ ಕೂಡ ಒಬ್ಬರು. ಇವರದು ಬಹಳ ಸಾದಾ ವ್ಯಕ್ತಿತ್ವ. ಆದ್ಯಾತ್ಮ ಚಿಂತಕ, ರಾಷ್ಟ್ರೀಯವಾದಿ. ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಶ್ರೇಷ್ಠ ಮಾನವ," ಎಂದು ಚಕ್ರವರ್ತಿ ಸೂಲಿಬೆಲೆ ಬರೆದುಕೊಂಡಿದ್ದಾರೆ.

Scroll to load tweet…