ಲೈಂಗಿಕ ಕಿರುಕುಳದ ಆರೋಪ ಮಾಡಿದ ಕಾರಣಕ್ಕೆ ಲೀಗಲ್‌ ನೋಟಿಸ್‌ ಕಳುಹಿಸುವುದಾಗಿ ಬಾಲಿವುಡ್ನ ಹೆಸರಾಂತ ನಟ ಹೇಳಿದ ಹಿನ್ನೆಲೆಯಲ್ಲಿ ಅದಕ್ಕೆ ನಟಿ ತನುಶ್ರೀ ದತ್ತಾ ಸಡ್ಡು ಹೊಡೆದಿದ್ದಾರೆ.  

ಮುಂಬೈ: ಲೈಂಗಿಕ ಕಿರುಕುಳದ ಆರೋಪ ಮಾಡಿದ ಕಾರಣಕ್ಕೆ ಲೀಗಲ್‌ ನೋಟಿಸ್‌ ಕಳುಹಿಸುವುದಾಗಿ ಹೆಸರಾಂತ ನಟ ನಾನಾ ಪಾಟೇಕರ್‌ ನೀಡಿರುವ ಹೇಳಿಕೆಗೆ ಬಾಲಿವುಡ್‌ ನಟಿ ತನುಶ್ರೀ ದತ್ತಾ ಸಡ್ಡು ಹೊಡೆದಿದ್ದಾರೆ. 

ನಾನಾ ಪಾಟೇಕರ್‌ ಅವರಿಂದ ನನಗೆ ಯಾವುದೇ ಲೀಗಲ್‌ ನೋಟಿಸ್‌ ಬಂದಿಲ್ಲ. ನನ್ನ ಬಾಯಿ ಮುಚ್ಚಿಸಲು ಇಂತಹ ಗೊಡ್ಡು ಬೆದರಿಕೆ ಹಾಕುವ ಬದಲಿಗೆ ಅವರು ಲೀಗಲ್‌ ನೋಟಿಸ್‌ ಕಳುಹಿಸಲಿ. ಆಗ ನಾನು ಏನು ಮಾಡುತ್ತೇನೆ ಎಂದು ತೋರಿಸುತ್ತೇನೆ ಎಂದು ಗುಡುಗಿದ್ದಾರೆ.

ನನ್ನ ಹಿತ ರಕ್ಷಣೆಗಾಗಿ ನಾನು ವಕೀಲರ ತಂಡವೊಂದನ್ನು ಮಾಡುತ್ತಿದ್ದೇನೆ. ಲೈಂಗಿಕ ಕಿರುಕುಳದ ಬಲಿಪಶು ಬಾಯಿಬಿಟ್ಟಾಗ ನೈತಿಕವಾಗಿ ದಿವಾಳಿಯಾಗಿರುವ ಭ್ರಷ್ಟವಕೀಲರು 2 ಸೆಕೆಂಡ್‌ಗಳ ಪ್ರಚಾರಕ್ಕಾಗಿ ಸರಣಿ ಕಿರುಕುಳಗಾರರನ್ನು ಸಮರ್ಥಿಸಿಕೊಳ್ಳಲು ಹೇಗೆ ಬರುತ್ತಾರೆ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಏಳುತ್ತದೆ ಎಂದಿದ್ದಾರೆ.