ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಮಿಳರು  ಬಿಗಿಪಟ್ಟು ಹಿಡಿದಿದ್ದಾರೆ. ಐಪಿಎಲ್​ ಕ್ರಿಕೆಟ್ ಮ್ಯಾಚ್​ ಬಹಿಷ್ಕರಿಸುವ ಬೆದರಿಕೆಯೊಡ್ಡಿದ್ದಾರೆ  ರೈತರು.  ತಿರುಚಿಯಲ್ಲಿ ಮರಳಲ್ಲಿ  ಮಲಗಿ ರೈತರು ಪ್ರತಿಭಟನೆ ನಡೆಸಿದ್ದಾರೆ.  

ಬೆಂಗಳೂರು (ಏ. 06): ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಮಿಳರು ಬಿಗಿಪಟ್ಟು ಹಿಡಿದಿದ್ದಾರೆ. ಐಪಿಎಲ್​ ಕ್ರಿಕೆಟ್ ಮ್ಯಾಚ್​ ಬಹಿಷ್ಕರಿಸುವ ಬೆದರಿಕೆಯೊಡ್ಡಿದ್ದಾರೆ ರೈತರು. ತಿರುಚಿಯಲ್ಲಿ ಮರಳಲ್ಲಿ ಮಲಗಿ ರೈತರು ಪ್ರತಿಭಟನೆ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಪ್ರೀಂಕೋರ್ಟ್ ಆದೇಶದಂತೆ ತಕ್ಷಣವೇ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು. ತಮಿಳುನಾಡಿಗೆ ಯಾವುದೇ ರೀತಿಯಲ್ಲಿ ಅನ್ಯಾಯ ಮಾಡಬಾರದು. ಐಪಿಎಲ್​ ಮ್ಯಾಚ್​ಗಿಂತ ತಮಿಳುನಾಡು ರೈತರೇ ಮುಖ್ಯ. ನಿರ್ವಹಣಾ ಮಂಡಳಿ ರಚನೆಯಾಗದಿದ್ದರೆ IPL ಮ್ಯಾಚ್ ನಡೆಯೋಕೆ ಬಿಡಲ್ಲ ಎಂದು ತಿರುಚಿಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ವಿರುದ್ಧ ಕಿಡಿಕಾರಿದ್ದಾರೆ. 

ನಾಳೆಯಿಂದ ಐಪಿಎಲ್ ಮ್ಯಾಚ್ ಶುರುವಾಗುತ್ತೆ. ತಮಿಳುನಾಡಿನಲ್ಲಿ 8 ಮ್ಯಾಚ್ ನಡೆಯುತ್ತದೆ. ಒಂದು ನಿರ್ವಹಣಾ ಮಂಡಳಿ ರಚಿಸದಿದ್ದರೆ ಐಪಿಎಲ್’ಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.