ಮಕ್ಕಳ ಕಣ್ಣೀರಿಗೆ ಮಂಡಿಯೂರಿದ ಶಿಕ್ಷಣ ಇಲಾಖೆ

First Published 24, Jun 2018, 7:30 PM IST
Tamilnadu: English teacher’s transfer put on hold
Highlights

ಮಕ್ಕಳ ಕೂಗಿಗೆ, ವಿನಂತಿಗೆ, ಭಾವನೆಗೆ ಶಿಕ್ಷಣ ಇಲಾಖೆ ಮಣಿದಿದೆ. ವರ್ಗಾವಣೆಗೊಂಡ ಶಿಕ್ಷಕನನ್ನು ಮುತ್ತಿದ ಮಕ್ಕಳ ಸುದ್ದಿ ಕೇಳಿ ತಿಳಿದ ಶಿಕ್ಷಣ ಇಲಾಖೆ ಅವರ ಟ್ರಾನ್ಸ್ ಫರ್ ವಿಚಾರ ಕೈಬಿಟ್ಟಿದೆ.

ತಿರುವಳ್ಳುವರ್ [ಜೂನ್ 24] ಮಕ್ಕಳ ಕೂಗಿಗೆ, ವಿನಂತಿಗೆ, ಭಾವನೆಗೆ ಶಿಕ್ಷಣ ಇಲಾಖೆ ಮಣಿದಿದೆ. ವರ್ಗಾವಣೆಗೊಂಡ ಶಿಕ್ಷಕನನ್ನು ಮುತ್ತಿದ ಮಕ್ಕಳ ಸುದ್ದಿ ಕೇಳಿ ತಿಳಿದ ಶಿಕ್ಷಣ ಇಲಾಖೆ ಅವರ ಟ್ರಾನ್ಸ್ ಫರ್ ವಿಚಾರ ಕೈಬಿಟ್ಟಿದೆ.

ಪ್ಲೀಸ್ ಸರ್ ನಮ್ಮನ್ನು ಬಿಟ್ಟು ಹೋಗಬೇಡಿ,, ಪ್ಲೀಸ್ ಸರ್ .. ಹೀಗೆಂದು ಮಕ್ಕಳು ಶಾಲೆಯ ಇಂಗ್ಲಿಷ್ ಶಿಕ್ಷಕ ಭಗವಾನ್ ಅವರನ್ನು ಸುತ್ತಿಕೊಂಡು ಕಣ್ಣೀರು ಹಾಕಿದ್ದರು. ತಮಿಳುನಾಡಿನ ತಿರುವಳ್ಳುವರ್ ಸಮೀಪದ ವೆಲ್ಲಿಯಾಗರಮ್  ಸರಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕ ಜಿ. ಭಗವಾನ್‌ ವರ್ಗಾವಣೆ ರದ್ದಾಗಿದ್ದು ಮಕ್ಕಳ ಸಂತಸ ಇದೀಗ ಇಮ್ಮಡಿಯಾಗಿದೆ

ಮಕ್ಕಳು ಶಿಕ್ಷಕನ ಸುತ್ತಿಕೊಂಡ ವಿಡಿಯೋ ವೈರಲ್

ಶಿಕ್ಷಕರನ್ನು ತಡೆಹಿಡಿದು ಮಕ್ಕಳು ಅಂಗಲಾಚಿ ಬೇಡಿಕೊಳ್ಳುತ್ತಿರುವ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಮಕ್ಕಳೊಂದಿಗೆ ಸದಾ ಬೆರೆತು ಅವರನ್ನು ಪಠ್ಯೇತರ ಚಟುವಟಿಕೆಯಲ್ಲೂ ಸದಾ ಮುಂದಿರುವಂತೆ ನೋಡಿಕೊಳ್ಳುತ್ತಿದ್ದ ಭಗವಾನ್ ಗೂ ಇದು ಸಂತಸ ತಂದಿದೆ.

loader