ತಮಿಳುನಾಡು ಬಂದ್ : ರಾಜ್ಯದಿಂದ ಬಸ್ ಸಂಚಾರ ಸ್ಥಗಿತ

First Published 5, Apr 2018, 10:23 AM IST
Tamilnadu Bundh Today
Highlights

ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯಿಸಿ ಇಂದು ತಮಿಳುನಾಡು ಬಂದ್ ಗೆ ಕರೆ ನೀಡಲಾಗಿದೆ.

ಬೆಂಗಳೂರು: ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯಿಸಿ ಇಂದು ತಮಿಳುನಾಡು ಬಂದ್ ಗೆ ಕರೆ ನೀಡಲಾಗಿದೆ.

 ತಮಿಳುನಾಡಿನಲ್ಲಿ ಭಾರಿ ಮಟ್ಟದಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ ಕರ್ನಾಟಕದಿಂದ  ತಮಿಳುನಾಡಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್​ಗಳ ಸಂಚಾರ ಬಹುತೇಕ ಸ್ಥಗಿತವಾಗಿದೆ.  ರಾಜ್ಯದ ಆನೇಕಲ್ ಡಿಪೋದಿಂದ ದಿನನಿತ್ಯ 20 ಕ್ಕೂ ಹೆಚ್ಚು ಬಸ್ಸುಗಳು ತಮಿಳುನಾಡಿನ ಹೊಸೂರಿಗೆ ತೆರಳುತ್ತಿದ್ದವು. ಅವುಗಳನ್ನೂ ಸಹ ಮುಂಜಾಗೃತವಾಗಿ ನಿಲ್ಲಿಸಲಾಗಿದೆ.

ಇನ್ನು ತಮಿಳುನಾಡಿನ ಪ್ರತಿಭಟನಾಕಾರರು ಕರ್ನಾಟಕದ ಗಡಿ ಅತ್ತಿಬೆಲೆ ಗಡಿ ಭಾಗದಲ್ಲಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜು ಹಾಗೂ ಕಾರ್ಯಕರ್ತರು ಅತ್ತಿಬೆಲೆ ಗಡಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಹೀಗಾಗಿ ಗಡಿ ಭಾಗದಲ್ಲಿ ಎರಡೂ ರಾಜ್ಯಗಳ ಪೊಲೀಸರು ಸೂಕ್ತ ಭದ್ರತೆ ಕೈಗೊಂಡಿದ್ದಾರೆ.

loader