ಕಾವೇರಿ ನದಿ ನಿರ್ವಹಣಾ ಮಂಡಳಿ ರಚಿಸಬೇಕೆಂದು ಆಗ್ರಹಿಸಿ ಚೆನ್ನೈನಲ್ಲಿ ರೈತರು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ

ಚೆನ್ನೈ (ಅ.17): ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ರೈತರು ಬೀದಿಗಿಳಿದಿದ್ದಾರೆ.

ಕಾವೇರಿ ನದಿ ನಿರ್ವಹಣಾ ಮಂಡಳಿ ರಚಿಸಬೇಕೆಂದು ಆಗ್ರಹಿಸಿ ಚೆನ್ನೈನಲ್ಲಿ ರೈತರು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ.

ರೈಲ್ ​ರೋಖೋ ಚಳವಳಿ ನಡೆಸಿದ ರೈತರು, ನೀರು ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿದ್ದಾರೆ. ಡಿಎಂಕೆ ನಾಯಕ ಸ್ಟಾಲಿನ್​ ನೇತೃತ್ವದಲ್ಲಿ 48 ಗಂಟೆಗಳ ಕಾಲ ಪ್ರತಿಭಟನೆಗೆ ಮುಂದಾಗಿದ್ದಾರೆ.

ನಾಳೆ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಐತಿಹಾಸಿಕ ತೀರ್ಪು ಬರುವ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಸುಪ್ರೀಕೋರ್ಟ್​ನತ್ತ ನೆಟ್ಟಿದೆ.