ತನ್ನ ಹುಟ್ಟುಹಬ್ಬದ ದಿನದಂದೇ ಐದೂವರೆ ವರ್ಷದ ಮಗುವನ್ನು ಕೊಂದ ಆರೋಪ ಹೊತ್ತಿರುವ ತಾಯಿ ಪ್ರಿಯಾಂಕ (Bengaluru Priyanka) ಸಕಲೇಶಪುರದಲ್ಲಿ ಬಂಧಿತಳಾಗಿದ್ದಾಳೆ. ಆದರೆ, ಆಕೆಯನ್ನು ವಿಚಾರಣೆ ಮಾಡಿದ ಪೊಲೀಸರಿಗೆ ಈ ಕೇಸಿನಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಏನದು ಇಲ್ಲಿದೆ ನೋಡಿ ವಿವರ..
ಬೆಂಗಳೂರು (ಜೂ.12): ಐದೂವರೆ ವರ್ಷದ ತನ್ನದೇ ಮಗುವನ್ನ ಕೊಂದ ಪ್ರಿಯಾಂಕ (Bengaluru killer mothger advocate Priyanka) ಇಷ್ಟು ದಿನ ತಲೆ ಮರೆಸಿಕೊಂಡಿದ್ದಳು. ಆದರೆ ಇವತ್ತು ಆಕೆ ಬೆಂಗಳೂರು ಪೊಲೀಸರಿಗೆ ಸಕಲೇಶಪುರದಲ್ಲಿ ಸಿಕ್ಕಿಬೀಳುತ್ತಿದ್ದಂತೆ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆಗ ಮಗು ಕೊಲೆಯ ಕುರಿತು ಹೇಳಿದ್ದನ್ನು ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಹೌದು, ಮಗುವಿನ ಕೊಲೆಗಾತಿ ಪ್ರಿಯಾಂಕ ಪೊಲೀಸರಿಗೆ ಸಿಕ್ತಿದ್ದಂತೆ ಕೇಸ್ಗೆ ಮತ್ತಷ್ಟು ಟ್ವಿಸ್ಟ್‌ಗಳು ಸಿಗ್ತಿವೆ. ಒಂದು ಶಾಕಿಂಗ್ ಮಾಹಿತಿ ಏನ್ ಗೊತ್ತಾ.? ಪ್ರಿಯಾಂಕ ತನ್ನ ಮಗುವನ್ನ ಕೊಂದಿದ್ದು ಅವಳ ಹುಟ್ಟು ಹಬ್ಬದ ದಿನದಂದೇ. ಅಷ್ಟೇ ಅಲ್ಲ ಹೆತ್ತ ಮಗುವನ್ನ ಕೊಂದು 12 ಗಂಟೆಗಳ ಕಾಲ ಮೃತದೇಹದ ಜೊತೆಯೇ ಇದ್ದಳು. ಹಾಗಾದ್ರೆ ಮುದ್ದು ಮಗುವಿನ ಮರ್ಡರ್ ಕೇಸಿನ ಹೊಸ ಅಪ್ಡೇಟ್ ಏನು.? ಈ ಪ್ರಿಯಾಂಕ ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ಆವತ್ತು ಮಾಡಿದ ಕುತಂತ್ರಗಳೇನು ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇವತ್ತಿನ ಎಫ್.ಐ.ಆರ್.
ಐಸ್‌ಕ್ರೀಮ್ ಕೇಳಿದ್ದಕ್ಕೆ ಕೊಂದೆ ಎಂದ ಪ್ರಿಯಕರ
ಮಗು ಸಾವಿನ ಬಗ್ಗೆ ತನಿಖೆ ನಡೆಸುತ್ತಿರೋ ಪೊಲೀಸರಿಗೆ ಅದು ಇದೊಂದು ಬರ್ಬರವಾಗಿ ನಡೆದಿರುವ ಕೊಲೆ ಅನ್ನೋದು ಗೊತ್ತಾಗಿದೆ. ಆದರೆ ಈ ಬಗ್ಗೆ ಪ್ರಿಯಾಂಕಾಳ ಪ್ರಿಯಕರ ಐಸ್ ಕ್ರೀಮ್ ಕೇಳಿದಕ್ಕೇ ಕೊಂದೆ ಅಂತ ಹೇಳಿದ್ದನು. ಆದ್ರೆ ಇವತ್ತು ಪ್ರಿಯಾಂಕ ಮತ್ತೊಂದು ಕಥೆ ಹೇಳ್ತಿದ್ದಾಳೆ. ಹಾಗಾದ್ರೆ ಆಕೆ ಪೊಲೀಸರ ಮುಂದೆ ಹೇಳಿದ್ದೇನು..? ಈ ಮಳ್ಳಿ ಪ್ರಿಯಾಂಕ ಇವತ್ತು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದೇಗೆ..? ಎಲ್ಲವನ್ನ ಡಿಟೇಲಾಗಿ ನೋಡಿ.
ನೋಡಿಕೊಳ್ಳಲು ಬಿಟ್ಟು ಹೋದರೆ ಹೆಣ ಹಾಕಿದ
ಆವತ್ತು ಪ್ರಿಯಾಂಕ ಬರ್ತಡೇ ಇತ್ತು. ಫುಲ್ ರೆಡಿಯಾಗಿ ಸಂಜೆ ವೇಳೆಗೆ ತನ್ನ ಬಾಯ್ ಫ್ರೆಂಡ್ ಮತ್ತು ಮಗುವಿನ ಜೊತೆಗೆ ಶಾಪಿಂಗ್ ಮಾಡುವುದಕ್ಕೆ ಹೋಗುತ್ತಾಳೆ. ಬೆಂಗಳೂರಿನ ಪ್ರತಿಷ್ಠಿಯ ಏರಿಯಾಗಳಲ್ಲಿ ಒಂದಾದ ಇಂದಿರಾನಗರದಲ್ಲಿ ಶಾಪಿಂಗ್ ಮಾಡಿ ಕಾರ್ ಬಳಿ ಬರ್ತಾರೆ. ಈ ಸಮಯದಲ್ಲಿ ಈ ಆಂಟಿಗೆ ಐಸ್‌ಕ್ರೀಮ್ ತಿನ್ನೋ ಆಸೆಯಾಗಿದೆ. ಕಾರಿನಲ್ಲಿ ಮಗುವನ್ನ ಬಿಟ್ಟು ಮೋಹನ್ಗೆ ನೋಡಿಕೊಳ್ಳಲು ಹೇಳಿ ಐಸ್‌ಕ್ರೀಮ್ ಅಂಗಡಿಗೆ ಹೋಗುತ್ತಾಳೆ. ಆದರೆ, ವಾಪಸ್ ಬಂದು ನೋಡಿದರೆ ಮೋಹನ್ ಮಗುವನ್ನ ಕೊಂದುಬಿಟ್ಟಿರುತ್ತಾನೆ.
ಮಗು ಸತ್ತರೂ ಪ್ರಿಯಕರನೊಂದಿಗೆ ಚಕ್ಕಂದ ಆಡಿದ ತಾಯಿ
ಈ ಸಮಯದಲ್ಲಿ ಅಮ್ಮ ಆದವಳು ಏನ್ ಮಾಡಬೇಕಿತ್ತು. ಆದರೆ ಈಕೆ ಮಾಡಿದ್ದು ಊಹೆಗೂ ನಿಲುಕದ್ದು. ಸತ್ತ ಮಗುವಿನ ಎದುರಲ್ಲೇ ಈ ಲವ್ ಬರ್ಡ್ಸ್‌ಗಳು ಪಾರ್ಟಿ ಮಾಡಿದ್ದಾರೆ. ರಾತ್ರಿಯಲ್ಲಾ ಮೋಜು ಮಸ್ತಿ ಮಾಡಿ ಬೆಳಗ್ಗೆದ್ದು ಫುಡ್ ಪಾಯ್ಸನ್ ಆಗಿ ಮಗು ಸಾವನ್ನಪ್ಪಿದೆ ಎಂದು ನಾಟಕವಾಡಿದ್ದಾರೆ. ಕೊನೆಗೆ ಗಂಡ ಕೊಟ್ಟ ಅನುಮಾನದ ದೂರಿನಿಂದ ಮಗು ಉಸಿರುಗಟ್ಟಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಸ್ವಂತ ಮಗು ಸತ್ತರೂ ಪ್ರಿಯಕರನೊಂದಿಗೆ ರಾತ್ರಿಯಿಡೀ ಎಂಜಾಯ್ ಮಾಡಿದ ತಾಯಿ ಹಾಸನದ ಸಕಲೇಶಪುರದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಸದ್ಯ ಪೊಲೀಸರು ಪ್ರಿಯಾಂಕಾಳನ್ನ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.


